ಮೂಲ್ಕಿ: ಕಿನ್ನಿಕಂಬಳ ಬೆಥನಿ ಶಾಲೆಯಲ್ಲಿ ಆ.25ರಂದು ಐಕ್ಸ್ &ಸಿ.ಬಿ.ಎಸ್.ಇ. ಸ್ಕೂಲ್ ನೇತೃತ್ವದಲ್ಲಿ ನಡೆದ 14ರ ವಯೋಮಿತಿಯ ಬಾಲಕರ ಥ್ರೋಬಾಲ್ ಟೂರ್ನಮೆಂಟ್ ನಲ್ಲಿ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಬಾಲಕರ ತಂಡ ತೃತೀಯ ಸ್ಥಾನ ಪಡೆದಿದೆ.
ವಿಜೇತ ತಂಡಕ್ಕೆ ಹಾಗೂ ತರಬೇತುದಾರ ಶಿಕ್ಷಕರಿಗೆ ಶಾಲಾ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ .ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 25 ತಂಡಗಳು ಭಾಗವಹಿಸಿದ್ದವು