ಕಿನ್ನಿಗೋಳಿ: ಆಧುನಿಕ ಯುಗದಲ್ಲಿ ಸಾವಯವ ಕೃಷಿ ಪದಾರ್ಥಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಮಹತ್ವ ವಹಿಸುತ್ತವೆ ಎಂದು ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸೂರ್ಯಕುಮಾರ್ ಹಳೆಯಂಗಡಿ ಹೇಳಿದರು.
ಅವರು ಕಿನ್ನಿಗೋಳಿಯ ಸರಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆದ ಮಾವು ಮತ್ತು ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮೇಳದಲ್ಲಿ ವಿವಿಧ ಬಗೆಯ ಹಲಸು, ಮಾವು, ಹಲಸಿನ ವಿವಿಧ ಖಾದ್ಯಗಳು, ತರಕಾರಿ ಬೀಜಗಳು, ಹಪ್ಪಳ ಸಂಡಿಗೆ ಮತ್ತಿತರ ಸಾವಯವ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿದ್ದವು.
ಕಾರ್ಯಕ್ರಮದಲ್ಲಿ ಯೋಗೀಶ್ ಆಚಾರ್ಯ, ಪುರುಶೋತ್ತಮ ಕೋಟ್ಯಾನ್, ಪ್ರಥ್ವಿರಾಜ್ ಆಚಾರ್, ದಿನೇಶ್ ಆಚಾರ್ಯ, ಸ್ವರಾಜ್ ಶೆಟ್ಟಿ, ಮಿಥುನ್ ಕೊಡೆತ್ತೂರು, ಪ್ರಭಾಕರ ಆಚಾರ್ಯ, ಪದ್ಮನಾಭ ಶೆಟ್ಟಿ, ದಾಮೋದರ ಶೆಟ್ಟಿ, ಶಶಿಕಲಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು