ಕಿನ್ನಿಗೋಳಿ:ಜೆ.ಬಿ ಪ್ರೆಂಡ್ಸ್ ಕ್ಲಬ್ ಕಿನ್ನಿಗೋಳಿ ಹಾಗೂ ಊರಿನ ಕೊಡುಗೈ ದಾನಿಗಳಿಂದ, ಪದ್ಮನೂರು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಭಾರತ್ ಮಾತಾ ಸರ್ಕಾರಿ ಪ್ರಾಥಮಿಕ ಶಾಲೆ ಪುನರೂರು ಇಲ್ಲಿಯ ಮಕ್ಕಳಿಗೆ ಉಚಿತ ಛತ್ರಿಯ ವಿತರಣೆ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಉದಯವಾಣಿಯ ವರದಿಗಾರ ರಘುನಾಥ್ ಕಾಮತ್ ಕೆಂಚನ್ ಕೆರೆ, ಹಾಗೂ ವೈದ್ಯರ ದಿನಾಚರಣೆಯ ಪ್ರಯುಕ್ತ ಕಿನ್ನಿಗೋಳಿಯ ವೈದ್ಯರಾದ ಡಾಕ್ಟರ್ ಉಮೇಶ್ ಹೆಗ್ಡೆ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಜುಲೈ.2 ರಂದು ನಡೆಯಿತು
ಶಾಸಕ ಉಮನಾಥ್ ಕೋಟ್ಯಾನ್ ಮಾತನಾಡಿ, ಇಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಘವನ್ನು ಕಟ್ಟಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಳಿಗೆ ಹಾಗೂ ಊರಿಗೆ ಇಂತಹ ಸಮಾಜ ಸೇವೆಯನ್ನು ಮಾಡುತ್ತಿದ್ದೀರಿ. ನಿಮ್ಮ ಸಮಾಜಸೇವಾ ಕೈಂಕರ್ಯಕ್ಕೆ ಸದಾ ನನ್ನ ಬೆಂಬಲವಿದೆ ಎಂದರು.
ಯುಗಪುರುಷದ ಭುವನ ಬಿ ರಾಮ ಉಡುಪ ಮಾತನಾಡಿ, ಜೆ. ಬಿ ಫ್ರೆಂಡ್ಸ್ ಕ್ಲಬ್ ಹಲವಾರು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮುಟ್ಟುವಂತಹ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಶ್ರೀ ಆದಿಶಕ್ತಿ ನಾಗಕನ್ನಿಕ ದೇವಿಗೆ ಹೂವಿನ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾಗಕನ್ನಿಕ ಕ್ಷೇತ್ರದ ಧರ್ಮದರ್ಶಿ ವಸಂತಿ ಶೇಷಪ್ಪ ಮಡಿವಾಳ, ಶೇಷಪ್ಪ ಮಡಿವಾಳ. ಗೌರವಾಧ್ಯಕ್ಷರಾದ ವಿನ್ಸೆಂಟ್ ಡಿಕೋಸ್ಟ, ಸಂತೋಷ್ ಶೆಟ್ಟಿ ಪುನರೂರು, ಉಪಾಧ್ಯಕ್ಷರಾದ ಮೈಕಲ್ ಪಿಂಟೊ , ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್. ಕ್ಲಬ್ನ ಸದಸ್ಯರಾಗಿರುವ ರೋಲ್ಪಿ ಡಿಸೋಜ, ಮನಿಷ್ ಕುಲಾಲ್ , ಉದಯಕುಮಾರ್, ರಾನ್ ಸನ್ ಮೆಂಡನ್ಸಾ,ಗೌತಮ್ ಪೂಜಾರಿ, ಕೊಡುಗೈದಾನಿಗಳು, ಶಾಲಾ ಶಿಕ್ಷಕಿಯರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು