ಉಡುಪಿ:ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಹಣ ಬಿಡುಗಡೆಗೆ ಫಲಾನುಭವಿಯಿಂದ ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಬೇಳೂರು ಗ್ರಾಮ ಪಂಚಾಯಿತಿ ಪಿಡಿಒ ಜಯಂತ್ ಎಂಬುವರನ್ನು ಬಂಧಿಸಿ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಸವ ಕಲ್ಯಾಣ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ರಾಧಾ ಮರಕಾಲ್ತಿ ಅವರಿಗೆ ನಾಲ್ಕು ಕಂತುಗಳ ₹1.20 ಲಕ್ಷ ಹಣ ಮಂಜೂರಾಗಿತ್ತು.
ಇದರಲ್ಲಿ ₹60 ಸಾವಿರ ಬಿಡುಗಡೆಗೆ ಪಿಡಿಒ ಜಯಂತ್ 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ರಾಧಾ ಮರಕಾಲ್ತಿ ಅವರ ಪುತ್ರ ಆರೋಪಿಸಿದ್ದು, ಪಿಡಿಓ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಮಂಗಳವಾರ ತೆಕ್ಕಟ್ಟೆ ಜಂಕ್ಷನ್ ಬಳಿ ದೂರುದಾರರಿಂದ ಹಣ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಪಿಡಿಒ ಜಯಂತ್‌ನನ್ನು ಬಂಧಿಸಿದ್ದಾರೆ.