ಕಾರ್ಕಳ : ಸಾಧನೆಯ ಶಿಖರವನ್ನು ಏರಬೇಕಾದರೆ ನಾವು ಸೋಲಿನಿಂದ ಕುಗ್ಗಬಾರದು. ಸದಾ ಕ್ರಿಯಾಶೀಲರಾದರೆ ಯಾವ ಸಾಧನೆಯೂ ಅಸಾಧ್ಯವಲ್ಲ. ತಂದೆ-ತಾಯಿ ಮತ್ತು ಗುರುಗಳ ಪ್ರೋತ್ಸಾಹವೇ ನಮಗೆ ನಿಜವಾದ ಸ್ಫೂರ್ತಿ ಹಾಗೂ ಯಶಸ್ಸಿನ ಹಿಂದಿನ ಮೂಲಮಂತ್ರ. ಸಮಸ್ಯೆಗಳನ್ನು ಸವಲಾಗಿ ಸ್ವೀಕರಿಸಿ ಗುರಿಯನ್ನು ತಲುಪಿ ಇತರರಿಗೆ ಮಾದರಿಯಾಗಬೇಕು ಎಂದು ಎಸ್.ವಿ.ಟಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆA ಮಿತ್ರಪ್ರಭಾ ಹೆಗ್ಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಕುಕ್ಕುಂದೂರು ಕೆ. ಎಂ. ಇ. ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 40ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಹಳೆವಿದ್ಯಾರ್ಥಿ ಹಾಗೂ ವಕೀಲರೂ ಆಗಿರುವ ವಿಖ್ಯಾತ್ ಜೈನ್ ಮಾತಾನಾಡಿ, ಸಂಸ್ಥೆಯು ಶಿಕ್ಷಣ, ಕ್ರೀಡೆ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿಸಂಸ್ಥೆಯು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಶಾಲಾ ಅಧ್ಯಕ್ಷರಾದ ಕೆ. ಎಸ್. ಇಮ್ತಿಯಾಜ್ ಅಹಮ್ಮದ್ ಮಾತನಾಡಿ, 40 ವರ್ಷವನ್ನು ಪೂರ್ಣಗೊಳಿಸಿರುವ ನಮ್ಮ ಸಂಸ್ಥೆಯು ಹಲವಾರು ಸಾಧಕರಿಗೆ ಪ್ರೇರಣೆ ನೀಡಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯ ನಮ್ಮೆಲ್ಲರಿಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟೇಬಲ್ ಟೆನಿಸ್ ಕೊಠಡಿ ಮತ್ತು ಇಕೋ ಕ್ಲಬ್ ಗಳನ್ನು ಉದ್ಘಾಟಿಸಲಾಯಿತು.
ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಲೊಲಿಟಾ ಡಿಸಿಲ್ವ ಸ್ವಾಗತಿಸಿ ಉಪನ್ಯಾಸಕಿಯರಾದ ಶ್ರೀಮತಿ ಪಾಟ್ಕರ್ ನಿರೂಪಿಸಿ, ಪೂಜಾ ವಂದಿಸಿದರು.

