ಕಾರ್ಕಳ: ಕುಡಿದ ಮತ್ತಿನಲ್ಲಿ ನಾಲ್ವರು ಯುವಕರ ತಂಡವೊಂದು ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ನಡೆಸಿ ಪಾನ್ ಶಾಪ್ ಅಂಗಡಿಯನ್ನು ಧ್ವಂಸಗೊಳಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕಾರ್ಕಳದ ಆನೆಕೆರೆ ಬಳಿಯ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದಲ್ಲಿ ಪಾನ್ ಶಾಪ್ ನಡೆಸುತ್ತಿದ್ದ ರಾಮ್ ಲಾಲ್ ಎಂಬವರ ಜೊತೆ ಕ್ಷುಲ್ಲಕ ಕಾರಣಕ್ಕಾಗಿ ಆರೋಪಿಗಳಾದ ಸಚಿನ್, ಧರ್ಮೇಂದ್ರ,ಅವಿನಾಶ್ ಹಾಗೂ ಪ್ರವೀಣ್ ಎಂಬವರು ರಾಮ್ ಲಾಲ್ ಮೇಲೆ ಹಲ್ಲೆ ನಡೆಸಿ ಪಾನ್ ಶಾಪ್ ಅಂಗಡಿಯನ್ನು ಸಂಪೂರ್ಣ ಧ್ವಂಸಗೊಳಿಸಿ ಕೇಸು ನೀಡದಂತೆ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿಬಂದಿದೆ. ಗಾಯಗೊಂಡ ಪಾನ್ ಶಾಪ್ ಅಂಗಡಿ ಮಾಲೀಕ ರಾಮ್ ಲಾಲ್ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಪೊಲೀಸರಿಗೆ ಆಸ್ಪತ್ರೆಯಿಂದ ಘಟನೆ ಕುರಿತ ಮಾಹಿತಿ ರವಾನೆಯಾಗಿದೆ.
ಪೊಲೀಸರು ಹಲ್ಲೆಗೊಳಗಾದ ರಾಮ್ ಲಾಲ್ ಹೇಳಿಕೆ ಪಡೆದು ಆರೋಪಿಗಳ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.