ಮಂಗಳೂರು : ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯು ಮಂಗಳೂರು – ಮಡಿಕೇರಿ -ಮೈಸೂರು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲಿ ಕಳೆದ ಕೆಲವು ಬಾರಿ ರಸ್ತೆ ಕುಸಿತ ಉಂಟಾಗಿ ಪ್ರವಾಸಿಗರಿಗೆ ತುಂಬಾ ತೊಂದರೆಯಾಗಿದೆ.ಈಗ ಮತ್ತೆ ಮಳೆ ಆರ್ಭಟ ಪ್ರಾರಂಭವಾಗಿದ್ದು, ಮಡಿಕೇರಿ ರಸ್ತೆಯ ಸಂಪಾಜೆ- ಕೊಯಾನಾಡು ಮದ್ಯೆ ರಸ್ತೆ ಕುಸಿತ ಉಂಟಾಗಿದ್ದು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಸಂಪರ್ಕ ರಸ್ತೆ ಸಂಪೂರ್ಣ ಕುಸಿದು ಪ್ರಯಾಣಿಕರು ಪರದಾಡುವಂತಾಗುತ್ತದೆ.
ಈ ಹಿಂದೆಯೂ ಈ ಘಾಟಿ ರಸ್ತೆ ಕುಸಿದು ಪ್ರಯಾಣಿಕರು ತಿಂಗಳುಗಳ ಕಾಲ ಪರದಾಡುವಂತಾಗಿತ್ತು. ಕೂಡಲೇ ಸರಕಾರ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಮಡಿಕೇರಿ ಸಂಪರ್ಕ ಕಡಿತಗೊಳ್ಳುತ್ತದೆ. ಆದ್ದರಿಂದ ಜನರು ಮತ್ತು ಪ್ರವಾಸಿಗಳ ಹಿತದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮೂಲತ ಸಂಪಾಜೆಯ ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಮುಖಂಡ ಜಯರಾಂ ಅಂಬೆಕಲ್ಲು ಅಗ್ರಹಿಸಿದ್ದಾರೆ.