ಕಾರ್ಕಳ: ಒಡಿಸ್ಸಾ ಮೂಲದ ಕಾರ್ಮಿಕ ತನ್ನ ಸ್ನೇಹಿತರ ಜತೆಗೆ ಕೆದಿಂಜೆ ಎಂಬಲ್ಲಿನ ಬಿಎಸ್ಕೆ ಗೇರುಬೀಜ ಕಾರ್ಖನೆಯ ಪಕ್ಕದಲ್ಲಿನ ಗೂಡಂಗಡಿ ಬಳಿಯ ರಾಜ್ಯ ಹೆದ್ದಾರಿಯ ರಸ್ತೆ ಅಂಚಿನಲ್ಲಿ ಗುರುವಾರ ರಾತ್ರಿ ತನ್ನ ಸಂಬAಧಿಕರಿಬ್ಬರ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಒಡಿಸ್ಸಾದ ಮಯೂರ್ ಭಾಂಜ್ ಜಿಲ್ಲೆಯ ಲುಹಾಶೀಲಾ ಗ್ರಾಮದ ಘನಶ್ಯಾಮ್(35) ಎಂದು ಗುರುತಿಸಲಾಗಿದೆ. ಮೇ 25ರಂದು ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಘನಶ್ಯಾಮ್, ಲಕ್ಷö್ಮಣ್ ಮುರ್ಮು ಹಾಗೂ ಕರಣ್ ಮುರ್ಮು ಎಂಬವರು ಕೆದಿಂಜೆ ಕಡೆಯಿಂದ ತಾವು ವಾವಿರುವ ಬಾಡಿಗೆ ರೂಮಿಗೆ ರಾತ್ರಿ 8.40ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೆಳ್ಮ,ಣ್ ಕಡೆಯಿಂದ ಬರುತ್ತಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಘನಶ್ಯಾಮ್ ಹಾಗೂ ಕರಣ್ ಮುರ್ಮು ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಈ ಪೈಕಿ ಘನಶ್ಯಾಮ್ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದು, ಕರಣ್ ಮುರ್ಮು ಅವರಿಗೆ ತೀವೃ ಗಾಯಗಳಾಗಿವೆ. ಅಪಘಾತವೆಸಗಿದ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ವಾಹನಕ್ಕಾಗಿ ಶೋಧ ನಡೆಸುತ್ತಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ