ಕಿನ್ನಿಗೋಳಿ :ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ ಇವರ ನೇತತ್ವದಲ್ಲಿ ಆಯ್ದ 25 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಪಂಜದಗುತ್ತು ಕೆಮ್ರಾಲ್ ಶಾಂತರಾಮ ಶೆಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉದ್ಯಮಿ ದೇವದಾಸ್ ಕುಳಾಯಿ,ಜಾಕ್ಸನ್ ಸಾಲ್ಡಾನ,ರಾಮ್ ಪ್ರಸಾದ್ ಶೆಟ್ಟಿ,ಹರಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ರಾಮದಾಸ್ ಶೆಟ್ಟಿ, ಅಧ್ಯಕ್ಷರಾದ ರವಿಚಂದ್ರ, ಕಾರ್ಯದರ್ಶಿ ನವೀನ್ ಕೊಟ್ಟಾರಿ, ಕೋಶಾಧಿಕಾರಿ ದಿನೇಶ್ ಹರಿಪಾದ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಆದರ್ಶ್ ಸ್ವಾಗತಿಸಿ, ಪ್ರತಾಪ್ ಆಚಾರ್ಯ ವಂದಿಸಿದರು. ಪವನ್ ಕಾರ್ಯಕ್ರಮ ನಿರೂಪಿಸಿದರು.




