ಅಜೆಕಾರು : ತಾಲೂಕಿನ ಜಾರ್ಕಳ-ಮುಂಡ್ಲಿ ತಿರುವಿನ ಬಳಿ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕೆರ್ವಾಶೆ ಬಂಗ್ಲೆಗುಡ್ಡೆಯ ಕೃಷ್ಣ ಪರವ (52 ವರ್ಷ) ಗಾಯಗೊಂಡವರು. ಅವರು ಸ್ಕೂಟರ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದು ದೇವರಾಜ್ ಜೈನ್ ಎಂಬವರ ಸ್ಕೂಟರ್ ರಿಪೇರಿಗಾಗಿ ತನ್ನ ಹೀರೋ ಪ್ಲೆಸರ್ ಸ್ಕೂಟರ್ ನಲ್ಲಿ ಕೆಂಪ್ಲಾಜೆ ಎಂಬಲ್ಲಿಗೆ ಹೋಗುತ್ತಿದ್ದಾಗ ಕೆರ್ವಾಶೆ ಪೇಟೆಯ ಮುಂದೆ ಜಾರ್ಕಳ-ಮುಂಡ್ಲಿ ತಿರುವಿನಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಕೃಷ್ಣ ಪರವ ಅವರ ಸ್ಕೂಟರ್ ಗೆ ಡಿಕ್ಕಿಯಾಗಿದೆ.
ಪರಿಣಾಮ ಸ್ಕೂಟರ್ ಸವಾರ ಕೃಷ್ಣಪರವ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೆ ಟಿಪ್ಪರ್ ಚಾಲಕನ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯೇ ಕಾರಣ ಎನ್ನಲಾಗಿದ್ದು ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.