Share this news

ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಯಾವುದೇ ಹೊಸತೆರಿಗೆಗಳ ಪ್ರಸ್ತಾಪವಿಲ್ಲದೇ, ಜನಸಾಮಾನ್ಯರ ಕಿಸೆಗೂ ಭಾರವಾಗದಿರುವ,ಹಾಲಿ ಜ ಜಾರಿಯಲ್ಲಿರುವ ಆರ್ಥಿಕ ಪುನಶ್ಚೇತನ ಕಾರ್ಯಕ್ರಮಗಳ ಮುಂದುವರಿಕೆಯ ಆಶ್ವಾಸನೆ ನೀಡಿ ಜನರಿಗೆ ವಿಶ್ವಾಸ ನೀಡುವ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ ‌ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು,
ದೇಶ ಮೊದಲು ಎನ್ನುವ ಅಭಿವೃದ್ಧಿಯ ಚಿಂತನೆಯನ್ನು ಮುಂದುವರಿಸಿರುವ ವಿತ್ತೀಯ ಪರಿಪಕ್ವತೆಗೆ ಮತ್ತು ವೃತ್ತಿ ಪರತೆಗೆ ಈ ಬಜೆಟ್ ಸಾಕ್ಷಿಯಾಗಿದೆ ವಿತ್ತೀಯ ಶಿಸ್ತಿನ ಅನುಪಾಲನೆಯ, ಚುನಾವಣಾ ಪೂರ್ವದಲ್ಲಿ ಯಾವುದೇ ಜನಪ್ರಿಯತೆಗೆ ಶರಣಾಗದಿರುವ, ಕಳೆದ ದಶಕದ “ಫಸ್ಟ್ ಡೆವೆಲಪ್ ಇಂಡಿಯಾ(FDI)” ಸಿದ್ಧಾಂತವನ್ನು ಮುಂದುವರಿಸುವ ಹಾಗು ಮುಂದೆ ಅಧಿಕಾರ ವಹಿಸಿ ಪೂರ್ಣಕಾಲೀನ ಮಂಡಿಸುವ ಆತ್ಮ ವಿಶ್ವಾಸದ ಈ ಮಧ್ಯಂತರ ಬಜೆಟ್ ದೇಶದ ಆತ್ಮ ನಿರ್ಭರತೆಯನ್ನು ಎತ್ತಿಹಿಡಿದಿದೆ ಎಂದಿದ್ದಾರೆ.
ಚುನಾವಣಾ ಪೂರ್ವದಲ್ಲಿ ಕೇವಲ ಜನಪ್ರಿಯತೆಗಾಗಿ ಈ ಬಜೆಟ್ ರೂಪಿಸದೇ ಅಭಿವೃದ್ಧಿಯ ದೂರದೃಷ್ಟಿಯನ್ನಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ.
ರೈಲ್ವೇ ಮತ್ತು ಕೃಷಿಗೆ ಆದ್ಯತೆ, ಯುವಕರು, ನಾರಿ ಶಕ್ತಿ, ಕೃಷಿಕರು ಮತ್ತು ಬಡಜನರನ್ನು ಕೇಂದ್ರವಾಗಿ ಈ ಬಜೆಟ್ ರೂಪಿಸಲಾಗಿದ್ದು,ಎಲ್ಲರನ್ನೂ ಒಳಗೊಂಡಿರುವ, ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ “ಸಬ್ ಕಾ ಸಾತ್, ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಸಿದ್ಧಾಂತವನ್ನು ಈ ಬಜೆಟ್ ಪ್ರತಿಬಿಂಬಿಸಿದೆ ಎಂದು ಗಣೇಶ್ ಕಾರ್ಣಿಕ್ ಬಜೆಟ್ ಕುರಿತು ಪ್ರತಿಕ್ರಿಯಿಸಿದ್ದಾರೆ.

 
 

 

 
 

Leave a Reply

Your email address will not be published. Required fields are marked *