ಕೊಚ್ಚಿ: ಮುಂಗಾರು ಮಾರುತಗಳು ಅಂದಾಜು ಒಂದು ವಾರ ತಡವಾಗಿ ಕೇರಳಕ್ಕೆ ಪ್ರವೇಶ ಪಡೆದುಕೊಂಡಿದೆ. ಗುರುವಾರ ರಾಜ್ಯದ ಶೇ.95ರಷ್ಟು ಪ್ರದೇಶಗಳಲ್ಲಿ ಮಳೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತು ತಮಿಳುನಾಡಿಗೆ ಮುಂಗಾರು ಆಗಮಿಸಲಿದೆ. ಗಾಳಿಯ ವೇಗ ಮತ್ತು ಪರಿಸ್ಥಿತಿಗಳು ಸರಿಯಾಗಿದ್ದರೆ ಅದು ದಕ್ಷಿಣದಿಂದ ಉತ್ತರಕ್ಕೆ ಅತ್ಯಂತ ವೇಗವಾಗಿ ಚಲಿಸುತ್ತದೆ ಎಂದು ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಹೇಳಿದ್ದಾರೆ.

ಮುಂದಿನ ವಾರ ಮಾನ್ಸೂನ್ ಮಾರುತಗಳು ಉತ್ತರ ಭಾರತ ತಲುಪಲಿದೆ. ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರ ಹೊತ್ತಿಗೆ ದೇಶಕ್ಕೆ ಪ್ರವೇಶ ಪಡೆಯುತ್ತದೆ. ಆದರೆ, ಈ ಬಾರಿ ಜೂನ್ 4 ರಂದು ಮಾನ್ಸೂನ್ ಕೇರಳವನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳತ್ತು. ಆದರೆ, ಅರಬ್ಬಿ ಸಮುದ್ರದಲ್ಲಿ ಉಂಟಾರ ಬೀಪರ್‌ಜಾಯ್ ಚಂಡಮಾರುತವು ಮಾನ್ಸೂನ್ ಮಾರುತದ ಮಾರ್ಗವನ್ನು ನಿರ್ಬಂಧ ಮಾಡಿತ್ತು. ಆದರೆ, ಬೀಪರ್‌ಜಾಯ್ ಚಂಡಮಾರುತವೀಗ ಸಣ್ಣ ಪಥ ಬದಲಾವಣೆ ಮಾಡಿದ್ದು, ಮಾತಿಸ್ತಾನದತ್ತ ಸಾಗಿದೆ. ಇದರಿಂದಾಗಿ ಕೇರಳದ ಕಡೆಗೆ ಮಾನ್ಸೂನ್ ಮಾರುತಗಳು ತಿರುಗಿವೆ. ಕೇರಳದ ಕೊಚ್ಚಿಯಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ತಾಪಮಾನದಲ್ಲೂ ದೊಡ್ಡ ಪ್ರಮಾಣದ ಇಳಿಕೆಯಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ತಮಿಳುನಾಡು, ಕರ್ನಾಟಕ, ಮತ್ತು ನೈಋತ್ಯ, ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿ, ಈಶಾನ್ಯ ರಾಜ್ಯಗಳು ಮತ್ತು ಕೇರಳದ ಉಳಿದ ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ಪ್ರಾರಂಭವಾದ ನಂತರ ಬೆಳೆಗೆ ಹಾನಿಯಾಗದಂತೆ ಬಿತ್ತನೆ ಪ್ರಾರಂಭಿಸಬಹುದು. ಮಳೆಯ ವಿಳಂಬದಿAದಾಗಿ ಜೂನ್‌ನಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆಯಿರಬಹುದು ಎಂದು ಸ್ಕೈಮೆಟ್ ವೆದರ್ ಉಪಾಧ್ಯಕ್ಷ (ಹವಾಮಾನ) ಮಹೇಶ್ ಪಲಾವತ್ ಹೇಳಿದ್ದಾರೆ. ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರ ಸುಮಾರಿಗೆ ಕೇರಳಕ್ಕೆ ಆಗಮಿಸುತ್ತದೆ ಮತ್ತು ಜುಲೈ 15 ರ ಹೊತ್ತಿಗೆ ಇಡೀ ದೇಶವನ್ನು ಆವರಿಸುತ್ತದೆ. ಈ ಬಾರಿಯ ಮಾನ್ಸೂನ್ ಜೂನ್ 4 ರಂದು ಕೇರಳಕ್ಕೆ +/-4 ದಿನಗಳಲ್ಲಿ ಆಗಮಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.



