ಎರ್ನಾಕುಲಂ : ಕೇರಳದ ಎರ್ನಾಕುಲಂ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕನ್ವೆನ್ಷನ್ ಹಾಲ್ ಒಂದರಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಭೀಕರ ಸ್ಪೋಟ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾರೆ.
ಭಾನುವಾರೆ ಮುಂಜಾನೆ 9 ಗಂಟೆಯ ಸುಮಾರಿಗೆ ಈ ಸ್ಪೋಟ ಸಂಭವಿಸಿದ್ದು, ಭಾನುವಾರವಾಗಿದ್ದರಿಂದ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಸಲ್ಲಿಸಲು ಕನ್ವೆನ್ಷನ್ ಹಾಲ್ ನಲ್ಲಿ ಸೇರಿದ್ದರು. ಸುಮಾರು 2 ಸಾವಿರ ಜನರು ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಈ ಸ್ಪೋಟ ಸಂಭವಿಸಿದೆ. Ãಡಲಾಗುತ್ತಿದೆ ಸ್ಪೋಟದಿಂದ ಸಭಾಂಗಣದಲ್ಲಿ ನೆರೆದಿದ್ದ ಜನರು ದಿಕ್ಕಪಾಲಾಗಿ ಓಡಿದ್ದು ಈ ವೇಳೆ ಅಲ್ಲಲ್ಲಿ ಮೊಬೈಲ್ ಗಳು ಸೇರಿದಂತೆ ಇತರೆ ವಸ್ತುಗಳು ಚಲ್ಲಪಲ್ಲಿ ಯಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ. ಗಾಯಾಳುಗಳನ್ನು ಎರ್ನಾಕುಲಂ ಹಾಗೂ ಕೊಟ್ಟಾಯಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಒಟ್ಟು ನಾಲ್ಕು ಕಡೆ ಸರಣಿ ಸ್ಪೋಟ ಸಂಭವಿಸಿದ್ದು ಕಲಮಸ್ಸೇರಿ ಕನ್ವೆನ್ಷನ್ ಸೆಂಟರ್ ನಲ್ಲಿ ಬ್ಲಾಸ್ಟ್ ನಡೆದಿದ್ದು ಸ್ಫೋಟದ ಬಳಿಕ ಕನ್ವೆನ್ಷನ್ ಸೆಂಟರ್ ಹೊತ್ತಿ ಉರಿದಿದೆ. ಆದರೆ ಈ ಸ್ಫೋಟದ ಹಿನ್ನೆಲೆ ಯಾವ ಸಂಘಟನೆಯ ಕೈವಾಡವಿದೆ ಎಂದು ತನಿಖೆ ಬಳಿಕ ತಿಳಿದು ಬರಲಿದೆ.
ಘಟನಾ ಸ್ಥಳಕ್ಕೆ ಕೇರಳದ ಪೊಲೀಸರು ಹಾಗೂ ಫೊರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ವಿದೇಶಿ ಉಗ್ರ ಸಂಘಟನೆಗಳ ಜತೆ ಸಂಪರ್ಕವಿರುವ ಕುರಿತು ಈ ಹಿಂದೆ ಎನ್‌ಐಎ ತನಿಖೆಯಲ್ಲಿ ತಿಳಿದುಬಂದಿತ್ತು.. ಈ ಸ್ಪೋಟದಿಂದ ದೇಶದಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು ಎನ್‌ಐಎ ಈ ಪ್ರಕರಣದ ಮಾಹಿತಿ ಪಡೆದುಕೊಂಡು ತನಿಖೆ ನಡೆಸಲಿದೆ.