Share this news

ಎರ್ನಾಕುಲಂ: ಕೇರಳದ ಎರ್ನಾಕುಲಂ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ ಮುಂಜಾನೆ ಕ್ರಿಶ್ಚಿಯನ್ನರು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಸರಣಿ ಸ್ಪೋಟ ಪ್ರಕರಣಕ್ಕೆ ಕುರಿತಂತೆ ಸ್ಪೋಟದ ಹೊಣೆಹೊತ್ತು ಶಂಕಿತ ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕನ್ವೆನ್ಷನ್ ಸೆಂಟರ್ ನಲ್ಲಿನ ಸರಣಿ ಸ್ಪೋಟಕಕ್ಕೆ ಕಾರಣ ನಾನೇ. ನಾನೇ ಸ್ಪೋಟಕಗಳನ್ನು ಇರಿಸಿದ್ದು ಅಂತ ಹೇಳಿ, ಶಂಕಿತ ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿರೋದಾಗಿ ತಿಳಿದು ಬಂದಿದ್ದು, ಈ ಕುರಿತು ಪೊಲೀಸರಿಂದ ಹೆಚ್ಚಿನ ಮಾಹಿತಿ ಬರಬೇಕಿದೆ.ಸ್ಪೋಟಕದ ಹೊಣೆ ಹೊತ್ತಿರುವ ವ್ಯಕ್ತಿ ಕೊಚ್ಚಿ ಮೂಲದವನು ಎನ್ನಲಾಗಿದೆ.
ಕೇರಳದಲ್ಲಿ ನಡೆದ ಸರಣಿ ಸ್ಪೋಟಕ ಪ್ರಕರಣದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
ಈ ಪ್ರಕರಣದ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಕರೆ ಮಾಡಿ ಮಾಹಿತಿ ಪಡೆದಿದ್ದು, ಈ ಪ್ರಕರಣದ ತನಿಖೆಗೆ ಇಳಿದಿರುವ ಎನ್‌ಐಎ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಘಟನೆಯ ಕುರಿತ ಸಮಗ್ರ ಮಾಹಿತಿ ಕಲೆ ಹಾಕುತ್ತಿದೆ

ಟಿಫಿನ್ ಬಾಕ್ಸ್ ಮೂಲಕ ಸ್ಪೋಟ?
ರ್ನಾಕುಲಂ ಕನ್ವೆನ್ಷನ್ ಸೆಂಟರ್ ನಲ್ಲಿ ಭಾನುವಾರ  ಡೆದ ಸರಣಿ ಸ್ಪೋಟ ಪ್ರಕರಣಕ್ಕೆ ಕುರಿತಂತೆ ಟಿಫಿನ್‌ ಬಾಕ್ಸ್‌ನಲ್ಲಿ ಐಇಡಿ ಇಟ್ಟು ಸ್ಫೋಟಿಸಲಾಗಿದೆ ಎಂದು ಕೇರಳ ಪೊಲೀಸ್‌ ಮಹಾ ನಿರ್ದೇಶಕ ಡಾ.ಶೇಖ್‌ ದರ್ವೇಶ್‌ ಸಾಹೇಬ್‌ ಅವರು ಖಚಿತಪಡಿಸಿದ್ದಾರೆ.
ಕೇರಳದಲ್ಲಿ ನಡೆದ ಬಾಂಬ್ ಸ್ಪೋಟದಿಂದ ಎಚ್ಚೆತ್ತ ಕೇಂದ್ರ ಗೃಹ ಇಲಾಖೆ ದೇಶದಾದ್ಯಂತ ಹೈಅಲರ್ಟ್ ಘೋಷಿಸಿದ್ದು,ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

 

 

 

 

 

 

 

 

Leave a Reply

Your email address will not be published. Required fields are marked *