ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಕೋಮು ಗಲಭೆಯಿಂದ ಮೃತಪಟ್ಟವರ ಕುಟುಂಬಕ್ಕೆ ಸೋಮವಾರ ತಲಾ 25 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂತ್ರಸ್ತ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರವಿದ್ದಾಗ ಕೋಮ ಗಲಭೆಯಲ್ಲಿ ಸಾವನ್ನಪಿದ್ದವರಿಗೆ 25 ಲಕ್ಷ ರೂ. ಕೊಟ್ಟಿದ್ದರು. ಕೇವಲ ಹಿಂದುಗಳಿಗೆ ಮಾತ್ರ 25 ಲಕ್ಷ ಕೊಟ್ಟಿದ್ದಾರೆ. ಮುಸ್ಲಿಮರಿಗೆ ಕೊಟ್ಟಿರಲಿಲ್ಲ. ಸರ್ಕಾರ ಎಲ್ಲರನ್ನೂ ಸಮನಾವಾಗಿ ನೋಡಬೇಕು. ಇದರ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ. ಅವರು ನೋಡ್ತೀವಿ ಅದು ಇದು ಎಂದು ಹೇಳಿದ್ದರು. ಪರಿಹಾರ ಕೊಡುವಾಗ ಸರಿಸಮನಾಗಿ ನೋಡಬೇಕು. ಪ್ರವೀಣ್ ನೆಟ್ಟಾರು, ಹರ್ಷ ಅವರಿಗೆ ಮಾತ್ರ ಪರಿಹಾರ ನೀಡಿದ್ದರು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಸೂದ್, ಪ್ರವೀಣ್, ಫಾಸೀಲ್, ಅಬ್ದುಲ್ ಜಲಿಲ್, ದೀಪಕ್ ರಾವ್ ಒಟ್ಟು ಆರು ಜನರಕ್ಕೆ ಪರಿಹಾರವನ್ನು ಕೊಡಬೇಕಿತ್ತು. ಆದರೆ, ಇಬ್ಬರಿಗೆ ಮಾತ್ರ ಕೊಇಟ್ಟು ನಾಲ್ವರಿಗೆ ಕೊಡಲಿಲ್ಲ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಾಕಬಾರದು. ಸತ್ತವರ ಕುಟುಂಬಕ್ಕೆ ಎಲ್ಲರಿಗೂ ಕೊಡಬೇಕು ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮು ಗಲಭೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ಕೊಟ್ಟು ಸುಮ್ಮನಾಗುವುದಿಲ್ಲ. ಈ ಕೊಲೆಗಳ ಬಗ್ಗೆ ಕಾನೂನು ಪ್ರಕಾರ ನಿಷ್ಪಕ್ಷಪಾತವಾಗಿ ತೆನಿಖೆ ಮಾಡುತ್ತೇವೆ. ಯಾರು ತಪ್ಪಿತಸ್ಥರಿರ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಮಾರಲ್ ಪೊಲೀಸಿಂಗ್‌ಗೆ ಕಡಿವಾಣ ಹಾಕಲು ಸೂಚಿಸಿದ್ದೇನೆ. ಯಾರೇ ಆಗಲಿ ಕಾನೂನು ತಗೆದುಕೊಳ್ಳುವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದರು.