Share this news

ಬೆಂಗಳೂರು: ಕೋವಿಡ್ ಬೂಸ್ಟರ್ ಡೋಸ್  ಗಳನ್ನು ಪಡೆಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜೀವಶಾಸ್ತ್ರಜ್ಞ ಶೇಖರ್ ಮಾಂಡೆ ಹೇಳಿದ್ದಾರೆ. ಕೋವಿಡ್ ಬೂಸ್ಟರ್​ ಡೋಸ್​ಗಳ ಕುರಿತು ಇರುವ ವೈಜ್ಞಾನಿಕ ಪುರಾವೆಗಳು ದುರ್ಬಲವಾಗಿವೆ. ಹಾಗಾಗಿ ಬೂಸ್ಟರ್ ಡೋಸ್​ಗಳನ್ನು ತೆಗೆದುಕೊಳ್ಳುವುದು ತುಂಬಾ ಸಹಾಯಕವಾಗುವುದಿಲ್ಲ ಎಂದು ಹೇಳಿದ್ದಾರೆ. ಈಗ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದ ಬಯೋಇನ್ಫರ್ಮ್ಯಾಟಿಕ್ಸ್ ಸೆಂಟರ್‌ನಲ್ಲಿ ಪ್ರತಿಷ್ಠಿತ ಪ್ರಾಧ್ಯಾಪಕರಾಗಿರುವ ಮಾಂಡೆ ಅವರು ಕೋವಿಡ್ ಪ್ರಕರಣಗಳ ಉಲ್ಬಣವು ಹೊಸ ರೂಪಾಂತರ ದಿಂದ ಉಂಟಾಗಿದೆ ಎಂದು ಹೇಳಿದರು

ನಮ್ಮ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರಬಹುದು, ಅಥವಾ ಕೊರೊನಾ ರೂಪಾಂತರಗೊಂಡಿರಬಹುದು ಅದೇನೇ ಇರಲಿ, ಹಿಂದಿನ ಅಲೆಗಳಲ್ಲಿದ್ದಷ್ಟು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಾಗಲಿ ಅಥವಾ ಸಾವಾಗಲಿ ಹೆಚ್ಚಾಗುವುದಿಲ್ಲ, ಈ ಉಲ್ಬಣವು ಮೊದಲ ಅಥವಾ ವಿನಾಶಕಾರಿ ಎರಡನೇ (ಡೆಲ್ಟಾ) ಅಲೆಯಂತೆ ಆಗುವುದಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಯಿಂದ ಆಣ್ವಿಕ ಬಯೋಫಿಸಿಕ್ಸ್‌ನಲ್ಲಿ ಪಿಎಚ್‌ಡಿ ಪಡೆದಿರುವ ಮಾಂಡೆ, ಸಾಮಾನ್ಯ ಮುನ್ನೆಚ್ಚರಿಕೆಗಳು ಒಂದೇ ಆಗಿವೆ ಮತ್ತು ಬೂಸ್ಟರ್ ಬಗ್ಗೆ ಲಕ್ಷ್ಯ ಕೊಡದೇ ಎಲ್ಲರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಓಡಾಡದೇ ಇರುವುದು, ಮನೆಯಲ್ಲಿ ಶುದ್ಧ ಗಾಳಿಯನ್ನು ಸೇವಿಸುವುದರಿಂದ ಸೋಂಕಿನಿಂದ ದೂರ ಇರಬಹುದು.

Leave a Reply

Your email address will not be published. Required fields are marked *