ಕಾರ್ಕಳ : ಕಾರ್ಕಳ ತಾಲೂಕು ಕೌಡೂರು ಗ್ರಾಮದ ಕಂಡಲ್ಕೆ ಎಂಬಲ್ಲಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಘಟನೆ ಶನಿವಾರ ನಡೆದಿದೆ.
ಕಂಡಲ್ಕೆಯ ಮಹಮ್ಮದ್ ಇರ್ಫಾನ್ ಎಂಬವರು ಫೆಬ್ರವರಿ 3 ರಂದು ಜಾತ್ರೆಯಲ್ಲಿ ವ್ಯಾಪಾರ ಮಾಡಲು ಹೋಗಿದ್ದು ಅವರ ಪತ್ನಿ ಫೆಬ್ರವರಿ 4 ರಂದು ಬೆಳಿಗ್ಗೆ ಅವರ ತಾಯಿ ಮನೆಯಾದ ಬೈಲೂರಿಗೆ ಹೋಗಿದ್ದರು.
ಈ ವೇಳೆ ಮನೆಯ ಮುಂದಿನ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ್ದ ಕಳ್ಳರು ಬೆಡ್ರೂಮಿನಲ್ಲಿರಿಸಿದ್ದ ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿದ್ದ ರೂ.4,000 ನಗದು, ಇನ್ನೊಂದು ಬೆಡ್ ರೂಮ್ ನಲ್ಲಿದ್ದ ಅಲ್ಮೆರಾದ ಲಾಕರ್ ನ ಬೀಗವನ್ನು ಮುರಿದು ಅದರಲ್ಲಿದ್ದ 5 ಪವನ್ ಚಿನ್ನದ ಕರಿಮಣಿಸರ, 6 ಪವನ್ ತೂಕದ ಚಿನ್ನದ ನೆಕ್ಲೇಸ್, 2 ಪವನ್ ತೂಕದ 2 ಚಿನ್ನದ ಬಳೆ, 4 ಪವನ್ ತೂಕದ ಒಂದು ಬ್ರಾಸ್ ಲೇಟ್, 5 ಪವನ್ ತೂಕದ ಚಿನ್ನದ ಉದ್ದ ನೆಕ್ಲೆಸ್, 1 ಪವನ್ ತೂಕದ ಮಗುವಿನ ಚಿನ್ನದ ಚೈನ್, 1 ಪವನ್ ತೂಕದ ಮಗುವಿನ ಚಿನ್ನದ ಕರಿಮಣಿ ಬಳೆಗಳು 2, 1 ಪವನ್ ತೂಕದ 3 ಚಿನ್ನದ ಉಂಗುರ, 1 ಪವನ್ ತೂಕದ ಮಗುವಿನ ಒಂದು ಚಿನ್ನದ ಬ್ರಾಸ್ಲೇಟ್ ಒಟ್ಟು ನಗದು ಸೇರಿ 6,28,000 ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

