Share this news

ಕಾರ್ಕಳ: ನಾನು ಎಂಬುದು ವಯಕ್ತಿಕ. ಆದ್ದರಿಂದ ಉನ್ನತಿಗೇರುವುದು, ಹೆಸರು ಗಳಿಸುವುದು ಸಂಸ್ಥೆಯಿಂದಲೇ ಹೊರತು ವ್ಯಕ್ತಿಯಿಂದಲ್ಲ. ವಿಭಿನ್ನವಾಗಿ ಯೋಚಿಸುವುದರಿಂದ ಕ್ರಿಯಾತ್ಮಕ ರಚನೆಗಳು ಹೊರಹೊಮ್ಮುತ್ತವೆ. ಪ್ರಯತ್ನಪೂರ್ವಕವಾದ ಕಾರ್ಯ ಖಂಡಿತ ಯಶಸ್ಸನ್ನು ತಂದುಕೊಡುತ್ತದೆ. ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಹೊಸತನ್ನು ಹುಡುಕಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳೂ ಸಹ ಅನೇಕ ರೀತಿಯ ಸಾಮರ್ಥ್ಯ ಹೊಂದಿದ್ದಾರೆ. ಭಿನ್ನ ವಿಚಾರಧಾರೆ ಹೊಂದಿದವರಿದ್ದಾರೆ. ಅವರ ಅಭಿರುಚಿಗೆ ತಕ್ಕಂತೆ ಮಾರ್ಗದರ್ಶನ ನೀಡಬೇಕಾದದ್ದು ಉಪನ್ಯಾಸಕರ ಕರ್ತವ್ಯವಾಗಬೇಕು ಎಂದು ರಾಮಕುಂಜೇಶ್ವರ ಪ್ರೌಢಶಾಲೆಯ ಶಿಕ್ಷಕ, ಜೆ ಸಿ ಐ ನ ತರಬೇತುದಾರ ಸತೀಶ್ ಭಟ್ ಪುತ್ತೂರು ಹೇಳಿದರು.
ಅವರು ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ “ಕ್ರಿಯೇಟಿವ್ ಉನ್ನತಿ” ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿ ಮಾತನಾಡಿದರು.

ಪ್ರಾಚಾರ್ಯರಾದ ವಿದ್ವಾನ್ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರಗಳು ಪ್ರತಿಯೊಬ್ಬ ಉಪನ್ಯಾಸಕರ ಹಾಗೂ ಉಪನ್ಯಾಸಕೇತರರು ವಿಮರ್ಶೆ ಮತ್ತು ಚಿಂತನೆಗೊಳಪಡಿಸುವAತೆ ಮಾಡುತ್ತವೆ. ನಮಗೆ ಅತ್ಯುತ್ತಮವಾದ ಅವಕಾಶಗಳಿವೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ನಾವೂ ಬದಲಾಗಿ ಸವಾಲನ್ನು ಸ್ವೀಕರಿಸಿ ಮುನ್ನುಗ್ಗಬೇಕಾಗಿದೆ. ಚಿಂತನೆಗಳೂ ಉನ್ನತವಾಗಿರಲಿ ಎಂದು ಹಾರೈಸಿದರು.

ಸಂಸ್ಥಾಪಕರಾದ ಡಾ ಗಣನಾಥ ಶೆಟ್ಟಿ, ಆದರ್ಶ ಎಂ. ಕೆ, ಅಶ್ವತ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಭಟ್ ಕೆ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರಿಯೇಟಿವ್ ಸಂಸ್ಥೆಯ ಉಡುಪಿ ಶಾಖೆಯ ಪ್ರಾಂಶುಪಾಲರಾದ ಸ್ಟಾನಿ ಲೋಬೋ ಹಾಗೂ ಹೆಚ್ ಕೆ ಎಸ್ ಹಾಸನ , ತ್ರಿಶಾ ಪದವಿ ಪೂರ್ವ ಕಾಲೇಜು ಉಡುಪಿ, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಉನ್ನತಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *