Share this news

ಹೆಬ್ರಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ಆಶ್ರಯದಲ್ಲಿ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಅಧ್ಯಾಪಕರಾದ ಎಸ್ ರಾಜು ಸೇರಿಗಾರ್ ಅವರಿಗೆ ಗುರು ಗೌರವಾರ್ಪಣೆ ಕಾರ್ಯಕ್ರಮ ಸೆ.4 ರಂದು ಹೆಬ್ರಿ ಕನ್ಯಾನ ಬಾಯರ್‌ಬೆಟ್ಟು ಎಂಬಲ್ಲಿ ನಡೆಯಿತು.

ಎಸ್ ರಾಜು ಸೇರಿಗಾರ್ ಅವರು ಗೌರವ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರೀತಿಗಿಂತ ದೊಡ್ಡ ಆಸ್ತಿ ಬೇರಾವುದೂ ಇಲ್ಲ.ಬದುಕಿನ ಪ್ರತಿಯೊಂದು ಘಟನೆಗಳೇ ಜೀವನ ಪಾಠ. ಕಾಯಕವೇ ಕೈಲಾಸವೆಂದು ನಂಬಿ ವೃತ್ತಿ ಜೀವನದಲ್ಲಿ ಮಾಡಿದ ಪ್ರಾಮಾಣಿಕತೆಯ ಸೇವೆಯೇ ಬದುಕಿನ ಸವಿ ನೆನಪುಗಳು ಎಂದರು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಮಾತನಾಡಿ, ತಿಂಗಳೆ ಶಾಲೆಯಲ್ಲಿ ರಾಜುಸೇರಿಗಾರ್ ಅವರ ಸಾಧನೆಗಳ ಬಗ್ಗೆ ಮಾತನಾಡಿದರು. ಪ್ರಾಮಾಣಿಕತೆಯ ಸೇವೆಯನ್ನು ಈ ಜಗತ್ತು ಮರೆಯಲು ಸಾಧ್ಯವಿಲ್ಲ.ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದ ಮೂಲಕ ಈ ರೀತಿ ಸರಳ ಸಜ್ಜನಿಕೆಯ ಹಿರಿಯ ನಿವೃತ್ತ ಅಧ್ಯಾಪಕರನ್ನು ಗೌರವಿಸುವ ಕಾರ್ಯ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯ ಶ್ಲಾಘನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕ ನಾರಾಯಣ ಅಡಿಗ,ಶಿವಪುರ ಗ್ರಾ.ಪಂ ಅಧ್ಯಕ್ಷೆ ಶೋಭಾ ಶೆಟ್ಟಿ, ಉಪಾಧ್ಯಕ್ಷ ಶಂಕರ ಬಡ್ಕಿಲ್ಲಾಯ, ಹೆಬ್ರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಪೂಜಾರಿ ,ಹೆಬ್ರಿ ಜೇಸಿಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.

ಪದಾಧಿಕಾರಿಗಳಾದ ವಿದ್ಯಾ ಜನಾರ್ಧನ್ ಪ್ರಾರ್ಥಿಸಿ,ಸನ್ಮಾನ ಪತ್ರವನ್ನು ವೀಣಾ ಆರ್ ಭಟ್ ವಾಚಿಸಿದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಪ್ರವೀಣ ಕುಮಾರ್ ಸ್ವಾಗತಿಸಿ, ಪದಾಧಿಕಾರಿ ಬಾಲಚಂದ್ರ ಹೆಬ್ಬಾರ್ ವಂದಿಸಿದರು ಕ.ಸಾ.ಪ ಹೆಬ್ರಿ ಘಟಕದ ಗೌರವ ಕಾರ್ಯದರ್ಶಿ ಮಂಜುನಾಥ್ ಕುಲಾಲ್ ಶಿವಪುರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರಾಜೀವ ಸೇರಿಗಾರ್ ಅವರ ಅಭಿಮಾನಿಗಳು,ಕ.ಸಾ.ಪ ಹೆಬ್ರಿ ತಾಲೂಕು ಕಾರ್ಯಕಾರಿ ಮಂಡಳಿ ಸದಸ್ಯರು,ಮನೆಯವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *