ಚಂಡೀಗಢ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಸತತ 3ನೇ ದಿನವೂ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ಇನ್ನಷ್ಟುತೀವ್ರಗೊಂಡಿದೆ. ಆತ ಗಡಿ ದಾಟಿ ಹೋಗಬಹುದು ಎಂಬ ಆತಂಕ ಇದ್ದು, ಗಡಿಯಲ್ಲಿ ಬಿಎಸ್‌ಎಫ್ ಹಾಗೂ ಸೀಮಾ ಸುರಕ್ಷಾ ಬಲಕ್ಕೆ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದೆ.
ಭಾರತದಲ್ಲಿ ದುಷ್ಕೃತ್ಯ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಅಮೃತ್‌ಗೆ ನೆರವು ನೀಡುವ ಮೂಲಕ ಭಾರತವನ್ನು ವಿಭಜಿಸುವ ಸಂಚು ರೂಪಿಸಿದೆ. ಜೊತೆಗೆ ಈತನ ಕೃತ್ಯಗಳಿಗೆ ಮಾದಕ ವಸ್ತು ದಂಧೆಕೋರರು ದೊಡ್ಡಮಟ್ಟದ ಆರ್ಥಿಕ ನೆರವು ನೀಡುತ್ತಿದ್ದಾರೆ. ಶನಿವಾರ ಆತ ಪರಾರಿಯಾಗಲು ಬಳಸಿದ ವಾಹನ ಕೂಡಾ ಮಾದಕ ವಸ್ತು ದಂಧೆ ಕೋರ ಉಡುಗೊರೆಯಾಗಿದ್ದ ನೀಡಿದ್ದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಲ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಭೀತಿ ಇರುವ ಕಾರಣ ಸೋಮವಾರವೂ ಪಂಜಾಬ್‌ನಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್ಸೆಮ್ಮೆಸ್ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿದೆ.
