ವಾರಣಾಸಿ : ಖ್ಯಾತ ಕ್ರಿಕೆಟ್ ಕೋಚ್ ರಾಮ್ ಲಾಲ್ ಯಾದವ್ ಮೇಲೆ ದುಷ್ಕರ್ಮಿಗಳು ಸೋಮವಾರ ಗುಂಡು ಹಾರಿಸಿರುವ ಘಟನೆ ವಾರಣಾಸಿಯ ಡಿಎವಿ ಇಂಟರ್ ಕಾಲೇಜು ಆವರಣದಲ್ಲಿ ನಡೆದಿದೆ.
ಯಾದವ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ವರದಿಗಳ ಪ್ರಕಾರ, ಬೆಳಿಗ್ಗೆ ಕಾಲೇಜು ಕ್ಯಾಂಪಸ್ಗೆ ತಲುಪಿದಾಗ ಇಬ್ಬರು ಮುಸುಕುಧಾರಿಗಳು ಅವರ ಹೊಟ್ಟೆಗೆ ಗುಂಡು ಹಾರಿಸಿದ್ದಾರೆ.
ನಂತರ ದಾಳಿಕೋರರು ಶಸ್ತ್ರಾಸ್ತ್ರಗಳನ್ನ ಅಲ್ಲೇ ಎಸೆದು ಕಾಲೇಜು ಗೇಟ್ನಿಂದ ಪರಾರಿಯಾಗಿದ್ದಾರೆ. ಅಪರಾಧಿಗಳ ಗುರುತು ಪತ್ತೆ ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನ ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರುತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಘಟನೆಯ ಹಿಂದಿನ ಉದ್ದೇಶ ನಮಗೆ ಇನ್ನೂ ತಿಳಿದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ವೇಳೆ ಬೆಳಗಿನ ವಾಕಿಂಗ್ಗೆ ಬಂದಿದ್ದ ಸಾಕಷ್ಟು ಮಂದಿ ಇದ್ದರು. ಅವರನ್ನ ವಿಚಾರಣೆ ನಡೆಸಲಾಗುತ್ತಿದೆ.