Share this news

ಉಡುಪಿ : ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಹಾಗೂ ಗುಂಡಿಬೈಲು ಹಿರಿಯ ಪ್ರಾಥಮಿಕ ( ಕನ್ನಡ ಮತ್ತು ಆಂಗ್ಲ ಮಾದ್ಯಮ) ಶಾಲೆಯ ಸಹಯೋಗ ದಲ್ಲಿ ಜೂ. 5ರಂದು ಗುಂಡಿಬೈಲು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಪರಿಸರ ಕಾಳಜಿಯ ಕುರಿತು ಮಾತನಾಡಿದರು.

ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿಯ ವಿಶೇಷ ಕಾರ್ಯಕ್ರಮ “ನಮ್ಮ ನಡೆ ಹಸಿರಿನೆಡೆ” ಅಭಿಯಾನಕ್ಕೆ ಮುಖ್ಯ ಅತಿಥಿ ಡಾ. ವಿಜಯೇಂದ್ರ ವಸಂತ್ ಚಾಲನೆ ನೀಡಿ ಮಾಡಿ ಜೀವನ ಧರ್ಮ ಮತ್ತು ಪರಿಸರ ಪ್ರೇಮದ ವಿಚಾರಪೂರ್ಣ ಮಾಹಿತಿ ನೀಡಿದರು.

ಜೆಸಿಐ ದೊಡ್ಡಣಗುಡ್ಡೆ ಪ್ರಕೃತಿ ಯ ಅಧ್ಯಕ್ಷ ಜೆಸಿ ಗಣೇಶ್ ನಾಯ್ಕ್ ವಿಶ್ವ ಪರಿಸರ ದಿನಾಚರಣೆಯ ಕೂಪನ್ ಬಿಡುಗಡೆ ಮಾಡಿ ಜೆಸಿಐ ಮೂಲಕ ಕೈಗೊಂಡ ಈ ಅಭಿಯಾನ ವಚನಬದ್ದವಾಗಿ ಪಾಲಿಸಿಕೊಂಡು ಬರುವುದಾಗಿ ತಿಳಿಸಿದರು.

ಸಂಸ್ಥಾಪಕ ಅಧ್ಯಕ್ಷರಾದ ಜೆಎಫ್ ಡಿ.ಎಂ ಎನ್. ನಾಯಕ್ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಪೂರ್ವಾದ್ಯಕ್ಷರು ಹಾಗೂ ನಿವೃತ್ತ ಸೈನಿಕ ಜೆಎಫ್ ಎಂ ಕೇಶವ ಆಚಾರ್ಯ ಮಾತನಾಡಿ ಮಕ್ಕಳಲ್ಲಿ ಕಲಿಕೆಯ ಜೊತೆ ಪರಿಸರದ ಜವಾಬ್ದಾರಿಯ ಅರಿವು ಇರಬೇಕು ಎಂದರು.

ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಉಡುಪ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದಪ್ಪ ಎಂ.ಎನ್ ಮಕ್ಕಳಿಗೆ ಪರಿಸರ ಜಾಗೃತಿಯ ಅರಿವು ಮೂಡಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜೆಸಿ ಎಂ.ಪ್ರಶಾಂತ್ ಆಚಾರ್ಯ, ಜೆಸಿ ಸತೀಶ್ ನಾಯ್ಕ್,ಜೆಸಿ ಸತೀಶ್ ಆಚಾರ್ಯ, ಜೆಸಿ ಪ್ರಶಾಂತ್, ಜೆಸಿ ಅನಿಲ್ ಕುಮಾರ್, ಜೆಸಿ ದೀಪಕ್,ಜೆಸಿ ಹರ್ಷಿತ್,ಜೆಸಿ ಪ್ರತಿಮಾ ಆಚಾರ್ಯ, ಜೆಜೆಸಿ ಪ್ರಾರ್ಥನಾ, ಮಾಲತಿ ಆಚಾರ್ಯ, ಜಯಶ್ರೀ ಕೇಶವ್, ವೀಣಾ ನಾಯಕ್
ಉಪಸ್ಥಿತರಿದ್ದರು.
ಜೆಸಿ ಉಮೇಶ್ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು.ಶಿಕ್ಷಕಿ ಮಮತಾ ವಂದಿಸಿದರು

Leave a Reply

Your email address will not be published. Required fields are marked *