Share this news

ಗುಜರಾತ್: ಇಲ್ಲಿನ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಆರ್ಭಟಿಸಿದೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಕುಸಿತಗೊಂಡಿದ್ದು, ಹಲವೆಡೆ ಮರಗಳು ಧರೆಗೆ ಉರುಳಿವೆ. ಬಿಪರ್ ಜಾಯ್ ಚಂಡಮಾರುತದ ಆರ್ಭಟಕ್ಕೆ ಈವರೆಗೆ ಇಬ್ಬರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ.ಗುಜರಾತ್​ನ ಭಾವ್​ನಗರದಲ್ಲಿ ಭಾರಿ ಮಳೆಯಲ್ಲಿ ಸಿಲುಕಿ ತಂದೆ-ಮಗ ಮೃತಪಟ್ಟಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ತಂದೆ-ಮಗ ಮೃತಪಟ್ಟಿದ್ದಾರೆ.


ಚಂಡಮಾರುತದಿಂದಾಗಿ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದು ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಯುದ್ದಕ್ಕೂ ಹಲವೆಡೆ ಮರಗಳು ಬುಡಮೇಲಾಗಿವೆ. ಅನೇಕ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹೀಗಾಗಿ ಗುಜರಾತ್ ನ 950ಕ್ಕೂ ಹೆಚ್ಚು ಹಳ್ಳಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.


ಶುಕ್ರವಾರ ಮುಂಜಾನೆ ಚಂಡಮಾರುತ ಉತ್ತರಕ್ಕೆ ಚಲಿಸುತ್ತಿದ್ದಂತೆ ದುರ್ಬಲಗೊಂಡಿದೆ .ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿ.ಮೀಗೆ ಕಡಿಮೆಯಾಗಿದೆ. ಅತ್ಯಂತ ತೀವ್ರ ಸೈಕ್ಲೋನಿಕ್ ಚಂಡಮಾರುತದಿಂದ (ವಿಎಸ್‌ಸಿಎಸ್) ತೀವ್ರ ಸೈಕ್ಲೋನಿಕ್ ಚಂಡಮಾರುತಕ್ಕೆ (ಎಸ್‌ಸಿಎಸ್) ಬದಲಾಗಿದೆ. ಇಂದು ರಾಜಸ್ಥಾನದಲ್ಲಿ ಭಾರಿ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

 

Leave a Reply

Your email address will not be published. Required fields are marked *