Share this news

ಕಾರ್ಕಳ: ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುತ್ವದ ಫೈರ್ ಬ್ರಾಂಡ್ ಮುತಾಲಿಕ್ ಹಠಾತ್ ಎಂಟ್ರಿಯಿAದ ಬಿಜೆಪಿಯ ಭದ್ರಕೋಟೆಯ ಕಲ್ಲುಗಳು ಅಲುಗಾಡಲು ಆರಂಭವಾಗಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಕಾರ್ಕಳದಲ್ಲಿ ಕಾಂಗ್ರೆಸ್ ಸ್ಥಿತಿ ಸಧ್ಯ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ, ಕಾರ್ಕಳದಲ್ಲಿ ಬಿಜೆಪಿಯಿಂದ ಸುನಿಲ್ ಕುಮಾರ್ ಗೆ ಟಿಕೆಟ್ ಬಹುತೇಕ ಟಿಕೆಟ್ ಪಕ್ಕಾ ಆಗಿದ್ದು, ಪ್ರಮೋದ್ ಮುತಾಲಿಕ್ ಸ್ಫರ್ದೆಗೆ ಅಧಿಕೃತ ಘೋಷಣೆ ಮಾಡಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟಿಗಾಗಿ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಡಿ.ಆರ್ ರಾಜು ಹಾಗೂ ಸುರೇಂದ್ರ ಶೆಟ್ಟಿ ಅರ್ಜಿ ಸಲ್ಲಿಸಿದ್ದಾರೆ. ಈ ನಾಲ್ವರು ಆಕಾಂಕ್ಷಿಗಳಲ್ಲಿ ಫೈನಲ್ ಯಾರು? ಅಥವಾ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಬಹುದೇ ಎನ್ನುವ ಲೆಕ್ಕಾಚಾರ ತಳ್ಳಿಹಾಕುವಂತಿಲ್ಲ. ಚುನಾವಣೆ ಘೋಷಣೆಗೆ ಇನ್ನೊಂದೇ ತಿಂಗಳು ಬಾಕಿಯಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸುವ ಎದೆಗಾರಿಕೆ ಯಾವ ಕಾಂಗ್ರೆಸ್ ನಾಯಕರಿಗೂ ಇಲ್ಲದಿರುವುದು ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ.

ಕಾರ್ಕಳದಲ್ಲಿ ಹಿಂದುತ್ವದ ರಕ್ಷಣೆಗಾಗಿ, ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ವಿರುದ್ದವಾಗಿ, ಸ್ವಜನಪಕ್ಷಪಾತ,ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ನನ್ನ ಸ್ಪರ್ಧೆ ಎನ್ನುವ ಮೂಲಕ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರವು ಗುರು ಶಿಷ್ಯರ ನಡುವಿನ ಕಾಳಗಕ್ಕೆ ವೇದಿಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿದೆ.ಈಗಾಗಲೇ ಬಣ ಜಗಳದಿಂದ ಹೈರಾಣಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುತಾಲಿಕ್ ರಂಗಪ್ರವೇಶದಿAದ ಟಾನಿಕ್ ಸಿಕ್ಕಂತಾಗಿದ್ದು,ಬಿಜೆಪಿ ಒಳಜಗಳದ ಲಾಭ ಪಡೆಯಲು ಹಣವಣಿಸುತ್ತಿದೆ. ಅಂತಿಮವಾಗಿ ಮುತಾಲಿಕ್ ಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಬಿಜೆಪಿ ಮತ ಬುಟ್ಟಿಗೆ ಡ್ಯಾಮೇಜ್ ಆಗುವುದು ಮಾತ್ರ ನಿಶ್ಚಿತ, ಆದರೆ ಇದೇ ಬೆಳವಣಿಗೆ ಕಾಂಗ್ರೆಸ್ ಪಕ್ಷದಲ್ಲೂ ನಡೆಯುವ ಸಾಧ್ಯತೆಯಿದೆ.ಯಾಕೆಂದರೆ ಸಧ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಹಿಂದೂ ಕಾರ್ಯಕರ್ತರ ಬೆಂಬಲಿಗರನ್ನು ಹೊಂದಿರುವ ಮುತಾಲಿಕ್ ಎರಡೂ ಪಕ್ಷಗಳಿಗೆ ಟಕ್ಕರ್ ಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಕಾರ್ಕಳದಲ್ಲಿ ಹಾಲಿ ಸಚಿವ ಸುನಿಲ್ ಕುಮಾರ್ ಅವರು ಅಭಿವೃದ್ದಿ, ಹಿಂದುತ್ವ ಹಾಗೂ ಯುವ ನಾಯಕತ್ವ ಎನ್ನುವ ಮೂರು ಅಂಶಗಳನ್ನು ಮುಂದಿಟ್ಟುಕೊAಡು ಚುನಾವಣೆ ಎದುರಿಸುತ್ತಾರೆ. ಸಂಘ ಪರಿವಾರದಿಂದ ರಾಜಕೀಯ ಬಂದಿರುವ ಸುನಿಲ್ ಕುಮಾರ್ ಪಾದರಸ ಚಲನೆಯುಳ್ಳ ಅತ್ಯಂತ ಚಾಣಾಕ್ಷ ರಾಜಕಾರಣಿ ಎನ್ನುವುದು ವಾಸ್ತವ. ಸಂಘಟನೆಯನ್ನು ಹೇಗೆ ಬಲಪಡಿಸಬೇಕು ಹಾಗೂ ಕಾರ್ಯಕರ್ತರನ್ನು ಹೇಗೆ ಬಳಸಿಕೊಳ್ಳಬೇಕು, ವಿರೋಧಿಗಳಿಗೆ ಹೇಗೆ ಉತ್ತರ ಕೋಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಭಿವೃದ್ದಿ ಕಾಮಗಾರಿಗಳೇ ತನಗೆ ಶ್ರೀರಕ್ಷೆಯಾಗಲಿದೆ ಇದರ ಜತೆಗೆ ಹಿಂದುತ್ವ ಹಾಗೂ ಯುವನಾಯಕತ್ವಕ್ಕೆ ಮತದಾರರು ಮಣೆಹಾಕಲಿದ್ದಾರೆ ಎನ್ನುವುದು ಸುನಿಲ್ ಕುಮಾರ್ ಲೆಕ್ಕಾಚಾರವಾಗಿದೆ.


ಈ ನಡುವೆ ಮುತಾಲಿಕ್ ಕಾಲಿಗೆ ಚಕ್ರಕಟ್ಟಿಕೊಂಡವರAತೆ ಈಗಾಗಲೇ ಕಾರ್ಕಳ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು,ನನಗೆ ಪಕ್ಷಾತೀತವಾಗಿ ಹಿಂದೂ ಕಾರ್ಯಕರ್ತರ ಅಪಾರ ಬೆಂಬಲವಿದೆ,ನಾನು ಸ್ಫರ್ಧಿಸುವ ಮುನ್ನವೇ 10 ಸಾವಿರ ಮತಗಳು ಪಡೆಯುತ್ತೇನೆ ಎಂದು ವಿರೋಧಿಗಳು ಹೇಳುತ್ತಿದ್ದಾರೆ ಆದರೆ ಅಂತಿಮವಾಗಿ ಕಾರ್ಕಳದಲ್ಲಿ ಗೆಲುವು ನನ್ನದೇ ಎಂದು ಮುತಾಲಿಕ್ ಹೇಳಿಕೊಂಡಿದ್ದಾರೆ.


ಸಧ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಕಂಪ್ಲೀಟ್ ಸೈಡ್ ಲೈನ್ ಆಗಿದ್ದು, ಗುರು ಶಿಷ್ಯರ ನಡುವಿನ ಸ್ಪರ್ಧೆಯ ವಿಚಾರವೇ ಹೆಚ್ಚಾಗಿ ಸದ್ದು ಮಾಡುತ್ತಿದ್ದು, ಮುತಾಲಿಕ್ ಸ್ಪರ್ಧೆಯ ಘೋಷಣೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಯಾರು ಉಳಿಯುತ್ತಾರೆ ಎನ್ನುವುದು ಸಧ್ಯ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *