Share this news

ನವದೆಹಲಿ: ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾ​ದ​ಕ್ಕೀ​ಡಾ​ಗಿದ್ದ ಕರ್ನಾ​ಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ. ‘ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್‌ ಸರ್ಕಾರ ಪುನರ್‌ ಪರಿಶೀಲನೆ ನಡೆಸಲಿದೆ. ಎಮ್ಮೆ, ಕೋಣಗಳನ್ನೇ ಹತ್ಯೆ ಮಾಡು​ತ್ತೇ​ವೆ. ಹಾಗಿ​ದ್ದಾ​ಗ ಹಸುಗಳನ್ನು ಏಕೆ ಕಡಿಯಬಾರದು?’ ಎಂದು ಸಚಿವ ವೆಂಕಟೇಶ್‌ ಕಳೆದ ಶನಿವಾರ ಪ್ರಶ್ನೆ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. 

ಬಿಜೆಪಿ ಇದ​ನ್ನು ರಾಷ್ಟ್ರಮ​ಟ್ಟ​ದಲ್ಲಿ ಪ್ರಸ್ತಾಪ ಮಾಡಿ ಕಾಂಗ್ರೆಸ್‌ ಅನ್ನು ಪ್ರಶ್ನಿ​ಸಿ​ತ್ತು. ಗುರು​ವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತ​ನಾ​ಡಿ​ದ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾ​ಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ, ‘ನಿಮ್ಮದೇ ಸಚಿವಾಲಯದ ಅಡಿಯಲ್ಲಿ ಬರುವ ಅಂಶಗಳ ಬಗ್ಗೆ ಗಮನ ಕೊಡಿ. ಕಾಯ್ದೆ ರೂಪಿ​ಸು​ವುದು ಹಾಗೂ ರದ್ದು ಮಾಡು​ವುದು ನಿಮ್ಮ ವ್ಯಾಪ್ತಿಗೆ ಬರಲ್ಲ. ಹೀಗಾ​ಗಿ ನಿಮ್ಮ ವ್ಯಾಪ್ತಿಗೆ ಬರದ ನೀತಿ​ಗಳ ಬಗ್ಗೆ ನಿರ್ಧಾರ ಪ್ರಕ​ಟಿ​ಸ​ಬೇಡಿ ಎಂದು ಹಾಗೂ ಮಿತಿಯಲ್ಲಿರಿ. ನಾವು (ಸ​ರ್ಕಾ​ರದ ಪ್ರಮುಖ​ರು​) ಈ ಬಗ್ಗೆ ನಿರ್ಧಾರ ಕೈಗೊ​ಳ್ಳ​ಲಿ​ದ್ದೇವೆ ಎಂದು ಸಚಿವರಿಗೆ ಸೂಚಿಸಲಾಗಿದೆ’ ಎಂದು ಸುರ್ಜೇವಾಲಾ ಹೇಳಿದ್ದಾರೆ.

Leave a Reply

Your email address will not be published. Required fields are marked *