ಲಕ್ನೋ: ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಅತಿಕ್ ಅಹ್ಮದ್ ಸಮಾಧಿ ಮೇಲೆ ತ್ರಿವರ್ಣ ಧ್ವಜ ಹಾಕಿದ ವಿವಾದವನ್ನು ಹುಟ್ಟುಹಾಕಿದ ಕಾಂಗ್ರೆಸ್‌ನ ನಾಯಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಏಪ್ರಿಲ್ 15 ರಂದು ಅತಿಕ್ ಮತ್ತು ಆತನ ಕಿರಿಯ ಸಹೋದರ ಅಶ್ರಫ್ ರಾತ್ರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಮೂವರು ಬಂದೂಕುಧಾರಿಗಳು ಗುಂಡಿಕ್ಕಿ ಅವರಿಬ್ಬರನ್ನೂ ಕೊಂದಿದ್ದರು. ಬಳಿಕ ಏಪ್ರಿಲ್ 16ರ ಸಂಜೆ ಓಲ್ಡ್ ಸಿಟಿ ಪ್ರದೇಶದ ಕಸರಿ ಮಸಾರಿ ಸ್ಮಶಾನದಲ್ಲಿ ಅತಿಕ್ ಮತ್ತು ಅಶ್ರಫ್‌ನ ಸಮಾಧಿ ಮಾಡಲಾಯಿತು.
ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ರಜ್ಜು ಎಂಬಾತ ಅತಿಕ್ ಅಹ್ಮದ್ ಸಮಾಧಿ ಮೇಲೆ ತ್ರಿವರ್ಣ ಧ್ವಜ ವಿಟ್ಟು ಭಾರೀ ವಿವಾದಕ್ಕೆ ಕಾರಣವಾಗಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಧೂಮಗಂಜ್ ಪೊಲೀಸರಿಂದ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ರಜ್ಜು ಬಂಧಿಸಲಾಗಿದೆ.