ಬೆಂಗಳೂರು:ಕಾAಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಸ್ ನಡೆಸುತ್ತಿದ್ದು ಇದಕ್ಕಾಗಿ ಆದಾಯದ ಮೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕೊಡುಗೆ ನೀಡಿರುವ ಸರ್ಕಾರ ಇದೀಗ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಮಾಡಿ ಆಮೂಲಕ ಉಚಿತ ಯೋಜನೆಯ ನಷ್ಟವನ್ನು ಸರಿದೂಗಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಗಸ್ಟ್1 ರಿಂದಲೇ ಬಸ್ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸ್ತುತ ರಾಜಹಂಸ ಸೇರಿದಂತೆ ಏಳು ವಿವಿಧ ರೀತಿಯ ಒಪ್ಪಂದದ ಮೇರೆಗೆ ಕಾರ್ಯ ನಿರ್ವಹಿಸುವ ಬಸ್‌ಗಳ ದರವನ್ನು ಏರಿಸಲಾಗುತ್ತಿದ್ದು, ಇದರ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಬಲ್ಲ ಮೂಲಗಳ ಪ್ರಕಾರ ಹೊಸ ಪರಿಷ್ಕ್ರತ ದರಗಳು ಮುಂದಿನ ತಿಂಗಳು ಅಂದರೆ ಆಗಸ್ಟ್ 1 ರಂದೇ ಜಾರಿಗೆ ಬರಲಿದೆ.
ಇನ್ನು ಇದಕ್ಕೂ ಮೊದಲು ಒಪ್ಪಂದದ ಮೇರೆಗೆ ಬುಕ್ ಮಾಡಿದ ಬಸ್‌ಗಳ ದರ ಇದಕ್ಕೆ ಅನ್ವಯಿಸುವುದಿಲ್ಲ. ಬದಲಾಗಿ ಆ ಒಪ್ಪಂದದ ಪ್ರಯಾಣವು ಹಳೇ ದರಗಳಲ್ಲೇ ಮುಂದುವರೆಯಲಿದ್ದು ಆಗಸ್ಟ್ ಒಂದರ ನಂತರ ಯಾರು ಈ ಬಸ್‌ಗಳನ್ನು ಬುಕ್ ಮಾಡುತ್ತಾರೋ ಅವರಿಗೆ ಹೊಸ ದರವು ಅನ್ವಯವಾಗಲಿದೆ.
ಹೊಸ ಆದೇಶದ ಪ್ರಕಾರ ಈ ಮೊದಲು ಗಂಟೆಗಳ ಲೆಕ್ಕದಲ್ಲಿನ ವಾಹನ ವ್ಯವಸ್ಥೆಯು ಇನ್ನು ಮುಂದೆ ಲಭ್ಯವಿರುವುದಿಲ್ಲ. ಗಂಟೆಗಳ ಲೆಕ್ಕದಲ್ಲಿನ ಒಪ್ಪಂದದ ವ್ಯವಸ್ಥೆಯನ್ನು ಸರ್ಕಾರ ಈ ವೇಳೆ ತೆಗೆದು ಹಾಕಲು ತೀರ್ಮಾನ ಕೈಗೊಂಡಿದೆ. ಈ ಮೂಲಕ ರಾಜ್ಯ ಬೊಕ್ಕಸಕ್ಕೆ ಇನ್ನಷ್ಟು ಆದಾಯವನ್ನು ತರುವ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಗೊಳಿಸಿದೆ.
ಹೊಸ ದರದ ಪ್ರಕಾರ ಕರ್ನಾಟಕ ಸಾರಿಗೆಯ ಸಾಮಾನ್ಯ ಬಸ್‌ಗಳು ಪ್ರತೀ ಕಿಲೋ ಮೀಟರ್‌ಗೆ ರಾಜ್ಯದಲ್ಲಿ ಸುಮಾರು 47 ರುಪಾಯಿಗಳು ಮತ್ತು ಬೇರೆ ರಾಜ್ಯದಲ್ಲಿ 50 ರೂಪಾಯಿಗಳಿಗೆ ದರಗಳನ್ನು ನಿಗದಿ ಮಾಡಲಾಗಿದ್ದು, ಪ್ರತಿ ಬಸ್‌ನಲ್ಲಿ ಸುಮಾರು 55/57 ಆಸನಗಳು ಇರಲಿದೆ. ಇನ್ನು ಈ ಬಸ್‌ಗಳು ಕನಿಷ್ಟ ಒಂದು ದಿನಕ್ಕೆ 350 ಕಿಲೋ ಮೀಟರ್‌ಗಳನ್ನು ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹೊಸ ದರದ ಪ್ರಕಾರ ಕರ್ನಾಟಕ ಸಾರಿಗೆಯ ಸಾಮಾನ್ಯ ಬಸ್‌ಗಳು ಪ್ರತೀ ಕಿಲೋ ಮೀಟರ್‌ಗೆ ರಾಜ್ಯದಲ್ಲಿ ಸುಮಾರು 47 ರುಪಾಯಿಗಳು ಮತ್ತು ಬೇರೆ ರಾಜ್ಯದಲ್ಲಿ 50 ರೂಪಾಯಿಗಳಿಗೆ ದರಗಳನ್ನು ನಿಗದಿ ಮಾಡಲಾಗಿದ್ದು, ಪ್ರತಿ ಬಸ್‌ನಲ್ಲಿ ಸುಮಾರು 55/57 ಆಸನಗಳು ಇರಲಿದೆ. ಇನ್ನು ಈ ಬಸ್‌ಗಳು ಕನಿಷ್ಟ ಒಂದು ದಿನಕ್ಕೆ 350 ಕಿಲೋ ಮೀಟರ್‌ಗಳನ್ನು ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಕೆಎಸ್‌ಆರ್‌ಟಿಸಿಯ ಮತ್ತೊಂದು ಜನಪ್ರಿಯ ಬಸ್ ಆದ ರಾಜಹಂಸ ಬಸ್‌ಗಳು ಸುಮಾರು 36 ಆಸನಗಳನ್ನು ಹೊಂದಿರಲಿದ್ದು ಈ ಬಸ್‌ಗಳು ಒಪ್ಪಂದದ ಸಮಯದಲ್ಲಿ ರಾಜ್ಯದಲ್ಲಿ 48 ರುಪಾಯಿಗಳಿಗೂ ಮತ್ತು ಅಂತರ್ ರಾಜ್ಯದಲ್ಲಿ 53 ರೂಪಾಯಿಗಳನ್ನು ಪ್ರತೀ ಕಿಲೋ ಮೀಟರ್‌ಗೆ ನಿಗದಿ ಪಡಿಸಲಾಗಿದೆ. ಈ ದರಗಳು ವಾರದ ಎಲ್ಲಾ ದಿನ ಅನ್ವಯವಾಗಲಿದೆ ಎಂಬುದು ಗಮನಿಸಬೇಕಾದ ಮತ್ತೊಂದು ಸಂಗತಿ.
ಈಗಾಗಲೇ ಸರ್ಕಾರ ಆಗಸ್ಟ್ ಒಂದರಿAದ ರಾಜ್ಯದಲ್ಲಿ ಕೆಲವೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ಈ ಕುರಿತಾಗಿ ಈ ಈಗಾಗಲೇ ತಮ್ಮ ಅಸಮಧಾನವನ್ನು ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ಬಸ್ ದರ ಏರಿಕೆಯಾದರೆ ಸರ್ಕಾರದ ವಿರುದ್ಧ ಜನ ಬೀದಿಗಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.