ಬೆಂಗಳೂರು: ಚಂದ್ರನಲ್ಲಿ ಇರುಳು ಕಳೆದು ಬೆಳಕು ಮೂಡಿದ್ದು, ಸ್ಲೀಪ್ ಮೋಡ್‌ನಲ್ಲಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಮತ್ತೆ ಎಚ್ಚರಗೊಳ್ಳುವ ಸಾಧ್ಯತೆ ಇದೆ. ಭೂಮಿಯಿಂದ ಸುಮಾರು ಮೂರು ಲಕ್ಷದ 75 ಸಾವಿರ ಕಿಲೋಮೀಟರ್ ದೂರದಲ್ಲಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಿದ ಚಂದ್ರಯಾನ-3ರ ಲ್ಯಾಂಡರ್ ಮತ್ತು ರೋವರ್ ಸ್ಲೀಪ್ ಮೋಡ್‌ನಲ್ಲಿದ್ದು ಮತ್ತೊಮ್ಮೆ ಎಚ್ಚರಗೊಳ್ಳುವ ನಿರೀಕ್ಷೆಯಿದೆ.
ಚಂದ್ರನ ಮೇಲೆ 14 ದಿನಗಳ ರಾತ್ರಿಯ ನಂತರ, ನಾಳೆ (ಸೆ.22) ಬೆಳಕು ಅಂತಿಮವಾಗಿ ದಕ್ಷಿಣ ಧ್ರುವ ಪ್ರದೇಶವನ್ನು ತಲುಪುತ್ತದೆ. ಇಲ್ಲಿರುವ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಮತ್ತೊಮ್ಮೆ ತಮ್ಮ ಸೌರ ಫಲಕಗಳ ಮೇಲೆ ಸೂರ್ಯನ ಬೆಳಕು ಬಿದ್ದ ತಕ್ಷಣ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ವಿಜ್ಞಾನಿಗಳು ನಿರೀಕ್ಷೆಯಲ್ಲಿದ್ದಾರೆ.ವಿಜ್ಞಾನಿಗಳು ಚಂದ್ರಯಾನ-3ರೊAದಿಗಿನ ಸಂಪರ್ಕವನ್ನು ಮರು ಸ್ಥಾಪಿಸಲು ಸಿದ್ಧತೆ ಆರಂಭಿಸಿದ್ದಾರೆ. ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯೋದಯವನ್ನು ನಿರೀಕ್ಷಿಸಲಾಗಿದೆ ಶೀಘ್ರದಲ್ಲೇ ವಿಕ್ರಮ್ ಮತ್ತು ಪ್ರಗ್ಯಾನ್ ಅಗತ್ಯವಿರುವ ಪ್ರಮಾಣದ ಸೂರ್ಯನ ಬೆಳಕನ್ನು ಪಡೆಯುತ್ತವೆ ಎಂದು ಇಸ್ರೋ ತನ್ನ ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್(ಹಿಂದಿನ ಟ್ವಿಟರ್) ನಲ್ಲಿ ತಿಳಿಸಿದೆ.
ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿAಗ್ ಆದ ನಂತರ ಇತಿಹಾಸವನ್ನು ಸೃಷ್ಟಿಸಿತು. ಅದರ ಪೇಲೋಡ್‌ಗಳು ಅಲ್ಲಿ ಒಂದು ಚಂದ್ರನ ದಿನ ಅಂದರೆ 14 ಭೂಮಿಯ ದಿನಗಳು ಅದ್ಭುತವಾಗಿ ಕೆಲಸ ಮಾಡಿದವು. ಚಂದ್ರನ ಮಣ್ಣಿನಲ್ಲಿ ಸಲ್ಫರ್, ಕಬ್ಬಿಣ ಮತ್ತು ಆಮ್ಲಜನಕ ಸೇರಿದಂತೆ ಇತರ ಖನಿಜಗಳ ಉಪಸ್ಥಿತಿಯನ್ನು ಖಚಿತಪಡಿಸುವುದರೊಂದಿಗೆ, ಲ್ಯಾಂಡರ್ ಮತ್ತು ವಿಕ್ರಮ್ ಪರಸ್ಪರ ಅದ್ಭುತವಾದ ಛಾಯಾಚಿತ್ರಗಳನ್ನು ತೆಗೆದುಕೊಂಡು ಭೂಮಿಗೆ ಕಳುಹಿಸಿದ್ದವು.