Share this news

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿ ಗಂಧಕ ಹಾಗೂ ಹಲವಾರು ಧಾತುಗಳು ಇರುವುದನ್ನು ಪತ್ತೆ ಹಚ್ಚಿದೆ. ಚಂದ್ರನಿಗೆ ಸಂಬAಧಿಸಿದAತೆ, ಗಂಧಕ ಒಂದು ಅಪರೂಪದ ಧಾತುವಾಗಿದ್ದು, ದಕ್ಷಿಣ ಧ್ರುವದ ಬಳಿ ಗಂಧಕ ಪತ್ತೆಯಾಗಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಇದು ಬಹುತೇಕ ಮಂಜುಗಡ್ಡೆಯ ರೂಪದಲ್ಲಿರುವ ನೀರಿನ ಲಭ್ಯತೆಯ ಕುರಿತಾದ ಸುಳಿವು ನೀಡಿದ್ದು, ಹೆಚ್ಚಿನ ಮಹತ್ವ ಸಾಧಿಸಿದೆ. ಮಂಜುಗಡ್ಡೆಯ ರೂಪದಲ್ಲಿರುವ ನೀರು, ಚಂದ್ರನ ದಕ್ಷಿಣ ಧ್ರುವದಲ್ಲಿ ನೆರಳಿನಿಂದ ಆವೃತವಾಗಿರುವ ಕುಳಿಗಳಲ್ಲಿದೆ ಎಂದು ನಂಬಲಾಗಿದೆ.

ಚAದ್ರನ ಮೇಲಿನ, ಈ ಹಿಂದೆ ಯಾರೂ ಅನ್ವೇಷಿಸಿರದ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದ ಬಳಿಕ, ಪ್ರಗ್ಯಾನ್ ರೋವರ್ ರಾಂಪ್ ಮೂಲಕ ವಿಕ್ರಮ್ ಲ್ಯಾಂಡರ್‌ನಿAದ ಕೆಳಗಿಳಿದು, ಮಹತ್ವದ ಮಾಹಿತಿಗಳನ್ನು ಕಲೆಹಾಕಲು ಆರಂಭಿಸಿತು. ರೋವರ್‌ನ ಪ್ರಾಥಮಿಕ ಉದ್ದೇಶ ಚಂದ್ರನ ಮೇಲೆ ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಹುಡುಕುವುದೇ ಆದರೂ, ರೋವರ್‌ನಲ್ಲಿನ ಉಪಕರಣಗಳು ಚಂದ್ರನ ವಾತಾವರಣವನ್ನು ಅನ್ವೇಷಿಸಿ, ಕಂಪನ ಚಟುವಟಿಕೆಗಳನ್ನೂ ಅನ್ವೇಷಿಸಲಿವೆ.

Leave a Reply

Your email address will not be published. Required fields are marked *