Share this news

ನವದೆಹಲಿ: ಬಾಹ್ಯಾಕಾಶದ ಕುತೂಹಲ ತಣಿಸಲು ಯಶಸ್ವಿ ಚಂದ್ರಯಾನ 3, ಸೂರ್ಯಯಾನ ಕೈಗೊಂಡ ಬೆನ್ನಲ್ಲೇ, ಇದೀಗ ಸಮುದ್ರದಾಳದ ಕುತೂಹಲ ತಣಿಸುವ ಸಲುವಾಗಿ ಆಳಸಮುದ್ರಯಾನದತ್ತ ಭಾರತ ಹೆಜ್ಜೆ ಇಟ್ಟಿದೆ. ಸಮುದ್ರದಲ್ಲಿ 500 ಮೀಟರ್ ಆಳಕ್ಕೆ “ಮತ್ಸ್ಯ 6000” ನೌಕೆಯನ್ನು ಕೊಂಡೊಯ್ಯುವ ಪ್ರಯೋಗವನ್ನು 2024ರ ಆರಂಭದಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಬಾಹ್ಯಾಕಾಶದಂತೆ ಸಮುದ್ರದಾಳ ಕೂಡಾ ಮಾನವನ ಪೂರ್ಣ ಎಣಿಕೆಗೆ ಸಿಗದ ಸಂಗತಿ. ಅಲ್ಲಿ ಅಪರೂಪದ ಲೋಹ ಇರಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ. ಹೀಗಾಗಿಯೇ ಬಂಗಾಳ ಕೊಲ್ಲಿಯ ಸಮುದ್ರದ 6000 ಮೀಟರ್ ಆಳದಲ್ಲಿ ಅಪರೂಪದ ಲೋಹಗಳಾದ ಕೋಬಾಲ್ಟ್, ನಿಕಲ್ ಮತ್ತು ಮ್ಯಾಂಗನೀಸ್ ಅದಿರಿನ ಸಂಶೋಧನೆ ನಡೆಸಲು ವಿಜ್ಞಾನಿಗಳು ಮುಂದಾಗಿದ್ದಾರೆ.

ಇAಥದ್ದೊAದು ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡವು “ಮತ್ಸ್ಯ 6000” ಎಂಬ ನೌಕೆಯನ್ನು ಸಿದ್ಧಪಡಿಸಿದೆ. 2.1 ಮೀಟರ್ ಸುತ್ತಳತೆ ಹೊಂದಿರುವ ಇದು ಸಮುದ್ರದ 6000 ಮೀಟರ್ ಆಳಕ್ಕೆ ಮೂವರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ. ನೌಕೆ ಒಮ್ಮೆ ಯಾನ ಆರಂಭಿಸಿದರೆ ಕನಿಷ್ಠ 12-16 ಗಂಟೆಗಳಷ್ಟು ಕಾಲ ಸಮುದ್ರದಲ್ಲಿ ಇರುವ ಸಾಮರ್ಥ್ಯ ಹೊಂದಿರುತ್ತದೆ. ನೌಕೆಯ ಒಳಗೆ ಮೂವರು ವ್ಯಕ್ತಿಗಳಿಗೆ 96 ಗಂಟೆಗಳಿಗೆ ಬೇಕಾಗುವಷ್ಟು ಆಮ್ಲಜನಕ ವ್ಯವಸ್ಥೆ ಅಳವಡಿಸಲಾಗುತ್ತದೆ. ಈ ನೌಕೆಯ ಮೊದಲ ಹಂತದ ಮಾನವ ರಹಿತ ಮತ್ತು ಮಾನವ ಸಹಿತ ಪ್ರಯೋಗವನ್ನು 2024ರ ಮೊದಲ ಭಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ನೌಕೆಯನ್ನು 500 ಮೀಟರ್ ಆಳಕ್ಕೆ ಮಾತ್ರವೇ ಕೊಂಡೊಯ್ದು ಅದರ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.

ಅಮೆರಿಕದ ಖಾಸಗಿ ಕಂಪನಿಯೊAದು ಟೈಟನ್ ಎಂಬ ನೌಕೆಯಲ್ಲಿ ಪ್ರವಾಸೋದ್ಯಮ ನಡೆಸುತ್ತಿದೆ. ಆದರೆ ಕಳೆದ ಜೂನ್‌ನಲ್ಲಿ ಅದು ಆಳಸಮುದ್ರಕ್ಕೆ ತೆರಳಿದ ವೇಳೆ ಸಮುದ್ರದ ಒತ್ತಡ ತಾಳಲಾಗದೇ ಒಳಸ್ಫೋಟಕ್ಕೆ ತುತ್ತಾಗಿ ಅದರಲ್ಲಿ ತೆರಳಿದ್ದ 5 ಜನರು ಸಾವನ್ನಪ್ಪಿದ್ದರು. ಹೀಗಾಗಿ ಅಂಥ ಯಾವುದೇ ಘಟನೆಗಳು ಸಂಭವಿಸದAತೆ ಮುನ್ನೆಚ್ಚರಿಕೆ ವಹಿಸಿರುವ ಭಾರತೀಯ ವಿಜ್ಞಾನಿಗಳ ನೌಕೆಯನ್ನು ಹಲವು ಹಂತದಲ್ಲಿ ನಾನಾ ರೀತಿಯ ಪರೀಕ್ಷೆಗೆ ಒಳಪಡಿಸಿದೆ.

80 ಮಿ.ಮೀ ದಪ್ಪನಾದ ಟೈಟಾನಿಯಂ ಅಲೋಯ್ ಬಳಸಿ ನೌಕೆಯ ವಿನ್ಯಾಸ ಮಾಡಲಾಗಿರುವ ಈ ನೌಕೆ ಸಮುದ್ರದ ಒತ್ತಡ 600 ಪಟ್ಟು ಹೆಚ್ಚು ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ವಿಜ್ಞಾನಿಗಳ ತಂಡ ಈ ನೌಕೆಯ ವಿನ್ಯಾಸ, ಅದಕ್ಕೆ ಬಳಸಲಾದ ವಸ್ತುಗಳು, ಪ್ರಮಾಣಪತ್ರ, ಬದಲಾದ ಕಾಲಕ್ಕನುಗುಣವಾದ ಅವಶ್ಯತೆ ಎಲ್ಲವನ್ನೂ ಪರಿಶೀಲಿಸಿದೆ.

ಅಮೆರಿಕ , ರಷ್ಯಾ , ಜಪಾನ್‌, ಫ್ರಾನ್ಸ್‌ ಮತ್ತು ಚೀನಾ ದೇಶಗಳು ಮಾತ್ರವೇ ಇಂಥ ಆಳ ಸಮುದ್ರಯಾನ ನೌಕೆಯನ್ನು ಯಶಸ್ವಿಯಾಗಿ ಪ್ರಯೋಗಿಸಿವೆ. ಒಂದು ವೇಳೆ ಭಾರತವೂ ಯಶಸ್ವಿಯಾದರೆ ಇಂಥ ತಂತ್ರಜ್ಞಾನ ಹೊಂದಿದ ವಿಶ್ವದ 6ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.

Leave a Reply

Your email address will not be published. Required fields are marked *