Share this news

ಬೆಂಗಳೂರು: ನಮ್ಮ ಸೌರಮಂಡಲದ ಅತೀದೊಡ್ಡ ನಕ್ಷತ್ರ ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳಿಸಿರುವ ತನ್ನ ಮೊಟ್ಟಮೊದಲ ಸೌರ ವೀಕ್ಷಣಾಲಯ ಉಪಗ್ರಹ ಆದಿತ್ಯ ಎಲ್-1 ಹೆಚ್ಚೂ ಕಡಿಮೆ ಚಂದ್ರಯಾನ-3 ನೌಕೆಗಿಂತ ಮೂರು ಪಟ್ಟು ದೂರವನ್ನು ಕ್ರಮಿಸಿದೆ. ಆದಿತ್ಯ ಎಲ್ 1 ಉಪಗ್ರಹ ಇಂದು (ಶನಿವಾರ) ಭೂಮಿಯಿಂದ 9.2 ಲಕ್ಷ ಕಿಲೋಮೀಟರ್ ದೂರದಲ್ಲಿ ಪ್ರಯಾಣ ಮಾಡುತ್ತಿದೆ ಎಂದು ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಭೂಮಿ ಹಾಗೂ ಚಂದ್ರನ ನಡುವೆ 3.84 ಲಕ್ಷ ಕಿಲೋಮೀಟರ್ ದೂರ ಇದೆ. ಅದೇ ಲೆಕ್ಕಾಚಾರದಲ್ಲಿ ನೋಡಿದರೆ, ಬಹುತೇಕ ಚಂದ್ರಯಾನ-3 ನೌಕೆಗಿಂತ ಮೂರುಪಟ್ಟು ದೂರ ಆದಿತ್ಯ ಎಲ್-1 ನೌಕೆ ಈಗಾಗಲೇ ಕ್ರಮಿಸಿದೆ.

ಆದಿತ್ಯ ಎಲ್ 1 ಗಗನನೌಕೆಯು ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ, ಭೂಮಿಯ ಪ್ರಭಾವದ ಗೋಳದಿಂದ ಯಶಸ್ವಿಯಾಗಿ ಪಾರಾಗಿದೆ. ಇದು ಈಗ ಸೂರ್ಯ-ಭೂಮಿಯ ಲಾಗ್ರೇಂಜ್ ಪಾಯಿಂಟ್ 1 (ಐ1) ಕಡೆಗೆ ತನ್ನ ಮಾರ್ಗವನ್ನು ನೋಡಿಕೊಂಡು ಹೋಗುತ್ತಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ತಿಳಿಸಿದೆ.

ಭೂಮಿಯ ಪ್ರಭಾವಳಿಯನ್ನು ಆದಿತ್ಯ ಎಲ್1 ತೊರೆಯುವುದರೊಂದಿಗೆ ಬಾಹ್ಯಾಕಾಶ ನೌಕೆ ಶಾಶ್ವತವಾಗಿ ಭೂಮಿಯನ್ನು ತೊರೆದಿದೆ. ಭೂಮಿ ಹಾಗೂ ಸೂರ್ಯನ ನಡುವಿನ 15 ಕೋಟಿ ಕಿಲೋಮೀಟರ್ ದೂರದ ಪೈಕಿ, 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಂಗ್ರೇಜ್ 1 ಪಾಯಿಂಟ್‌ನಲ್ಲಿ ಆದಿತ್ಯ ಎಲ್1 ನೆಲೆಯಾಗಲಿದೆ. ಮುಂದಿನ ಜನವರಿಯ ಆರಂಭದಲ್ಲಿ ಆದಿತ್ಯ ಎಲ್1 ನೌಕೆ ಲಾಂಗ್ರೆಜ್ ಪಾಯಿಂಟ್ ತಲುಪುವ ಸಾಧ್ಯತೆ ಇದೆ.

 

 

 

 

Leave a Reply

Your email address will not be published. Required fields are marked *