ಬೆಳಗಾವಿ : ಉದ್ಯಮಭಾಗದಿಂದ ನೆಹರುನಗರ ಕಡೆಗೆ ಹೊರಟ್ಟಿದ ಕಾರ್ ನಲ್ಲಿ ಏಕಾಏಕಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ಸೋಮವಾರ ಕೊಲ್ಲಾಪುರ ವೃತ್ತದ ಬಳಿ ನಡೆದಿದೆ.
ಗೋವಾ ಪಾಸಿಂಗ್ ಕಾರು ಜಿಲ್ಲೆಯ ಉದ್ಯಮಭಾಗದಿಂದ ನೆಹರುನಗರದ ಕಡೆಗೆ ಹೊರಟಿದ್ದ ವೇಳೆ ಕೊಲ್ಲಾಪುರ ವೃತ್ತದ ಬಳಿ ಬರುತ್ತಿದ್ದಂತೆ ಕಾರಿನೊಳಗೆ ಏಕಾಏಕಿಬೆಂಕಿ ಹೊತ್ತಿಕೊಂಡು ಈ ಘಟನೆ ಸಂಭವಿಸಿದೆ.

ಕಾರ್ ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣ ಬೆಳೆಸಿದ್ದರು. ಕೊಲ್ಲಾಪುರ ವೃತ್ತದ ಬಳಿ ಇರುವ ಟ್ರಾಫಿಕ್ ಸಿಗ್ನಲ್ ಬಳಿ ಕಾರ್ ನಿಂತಾಗ ಹೊತ್ತಿಕೊಂಡ ಬೆಂಕಿ. ಕಾರ್ ಗೆ ಬೆಂಕಿ ತಗುಲಿದ್ದನ್ನು ಕಂಡ ಅಕ್ಕಪಕ್ಕದವರು ಚಾಲಕನಿಗೆ ತಿಳಿಸಿದಾಗ ಕಾರ್ ನಲ್ಲಿದ್ದ ಮೂವರು ಹೊರಗಡೆ ಬಂದಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಸಂಚಾರ ಪೊಲೀಸರು ಅಗ್ನಿ ಶಾಮಕದಳದ ಸಿಬ್ಬಂದಿಗೆ ತಿಳಿಸಿದ್ದಾರೆ.
ಆದರೆ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ತಗುಲಿದ ಕಾರ್ ನಂದಿಸಲು ಯಶಸ್ವಿಯಾದರೂ ಸಹ ಕಾರ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ.