ಚಿಕ್ಕಮಗಳೂರು : ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನ ಇಂದಿಗೆ ಅಂತಿಮಗೊಳ್ಳಲಿದೆ.
ಒಂದು ವಾರದಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನಕ್ಕೆ ಇಂದು (ಭಾನುವಾರ) ತೆರೆ ಬೀಳಲಿದ್ದು, ನಾಗಸಾಧು ಸೇರಿದಂತೆ ವಿವಿಧ ಮಠಾಧೀಶರು ನಗರದಾದ್ಯಂತ ಬೃಹತ್ ಶೋಭಾಯಾತ್ರೆ ನಡೆಸಿ, ದತ್ತಪೀಠದಲ್ಲಿ ಹೋಮ-ಹವನ ನಡೆಸಿಲಿದ್ದಾರೆ.
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ಮಾಲಾಧಾರಿಗಳು ದತ್ತಪೀಠ ತೆರಳಲಿದ್ದಾರೆ. ಸುಮಾರು 5000 ಸಾವಿರಕ್ಕೂ ಅಧಿಕ ದತ್ತಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ದತ್ತಮಾಲಾಧಾರಾಣೆ ಹಿನ್ನೆಲೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿಸುವ ಪೊಲೀಸ್ ಇಲಾಖೆ ದತ್ತಪೀಠ ಸೇರಿದಂತೆ ಜಿಲ್ಲಾದ್ಯಂತ 2000 ಕ್ಕೂ ಅಧಿಕ ಪೊಲೀಸ್ ಬಂದೋಬಸ್ತ್ ಕಲ್ಪಿಸಿದೆ.
ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ 26 ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ. 8 ಕೆ.ಎಸ್.ಆರ್.ಪಿ. 12 ಡಿಎಆರ್ ತುಕಡಿ, ನಗರದಲ್ಲಿ 800-900 ಪೊಲೀಸರನ್ನು ನಿಯೋಜಿಸಿದ್ದಾರೆ. 35 ಪಿಎಸ್ಐ, 15 ಸಿಪಿಐ, 4 ಡಿವೈಎಸ್ಪಿ ಓರ್ವ ಎಸ್ಪಿ ಹಾಗೂ ಎಸ್ಪಿ ಬಂದೋಬಸ್ತ್ ನಲ್ಲಿ ಇದ್ದಾರೆ. ಜೊತೆಗೆ 300 ಹೋಂಗಾರ್ಡ್ಗಳನ್ನೂ ನೇಮಿಸಿದ್ದಾರೆ.







ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾದ್ಯಂತ 26 ಚೆಕ್ ಪೋಸ್ಟ್ ನಿರ್ಮಿಸಿದ್ದಾ. 8 ಕೆ.ಎಸ್.ಆರ್.ಪಿ. 12 ಡಿಎಆರ್ ತುಕಡಿ, ನಗರದಲ್ಲಿ 800-900 ಪೊಲೀಸರನ್ನು ನಿಯೋಜಿಸಿದ್ದಾರೆ. 35 ಪಿಎಸ್ಐ, 15 ಸಿಪಿಐ, 4 ಡಿವೈಎಸ್ಪಿ ಓರ್ವ ಎಸ್ಪಿ ಹಾಗೂ ಎಸ್ಪಿ ಬಂದೋಬಸ್ತ್ ನಲ್ಲಿ ಇದ್ದಾರೆ. ಜೊತೆಗೆ 300 ಹೋಂಗಾರ್ಡ್ಗಳನ್ನೂ ನೇಮಿಸಿದ್ದಾರೆ.
