ಕಾರ್ಕಳ : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಕ್ಷೇತ್ರ ನಂದಿ ಪರ್ವತದಲ್ಲಿ ವಿರಾಜಮಾನರಾಗಿದ್ದ ಜೈನಸಂತ ಮುನಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ತೀವ್ರ ಖಂಡನೀಯ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಹೇಳಿದ್ದಾರೆ.
ಜಗತ್ತಿಗೆ ಶಾಂತಿಯನ್ನು ಬಯಸುವ ಮುನಿಯನ್ನು ಕ್ರೂರವಾಗಿ ಹತ್ಯೆ ಗೆಯ್ಯಿದಿರುವುದು, ಶಾಂತಿ ಪ್ರಿಯನಾಡಿಗೆ ತಲೆತಗ್ಗಿಸುವ ಅ ಮಾನವೀಯ ಕೃತ್ಯ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಂತರ ಮೇಲೆ ಯಥೇಚ್ಛವಾಗಿ ದಾಳಿಗಳು ನಡೆಯುತ್ತಿರುವುದು ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಆದುದರಿಂದ ಸರಕಾರ ಕೂಡಲೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ

