ಕಾರ್ಕಳ; ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ, ದಿಗಂಬರ ಮುನಿಗಳ ಹತ್ಯೆ ಮನಸ್ಸಿಗೆ ತೀವ್ರ ಅಘಾತ ತಂದಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮುನಿಗಳ ಹತ್ಯೆಗೈದ ಕೊಲೆಗಡುಕರನ್ನು ಬಂಧಿಸಿ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಮಾಜ ಸುಧಾರಣೆಗೆ ಸಾಧುಸಂತರ ಕೊಡುಗೆ ಮಹತ್ತರವಾಗಿದೆ.ಧರ್ಮ ಹಾಗೂ ಸನಾತನ ಸಂಸ್ಕಾರ,ಅಹಿAಸೆಯ ತತ್ವಗಳನ್ನು ಸಾರುವಂತಹ ಸಾಧು ಸಂತರನ್ನು ಅಮಾನುಷವಾಗಿ ಹತ್ಯೆಗೈದ ಕೃತ್ಯವನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು ನಾಡಿನ ಸಾಧು ಸಂತರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಜೈನಮುನಿಗಳ ಅಗಲುವಿಕೆಯಿಂದ ಜೈನ ಸಮಾಜವಲ್ಲದೆ ಇಡೀ ನಾಡು ದು;ಖತ್ರಪ್ತವಾಗಿದ್ದು ದಿಗಂಬರ ಮುನಿಗಳ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಸಮುದಾಯಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.