ನವದೆಹಲಿ : ಪಿಎಲ್ಎ ಪಡೆಗಳ ನಿಯೋಜನೆಯ ದೃಷ್ಟಿಯಿಂದ ಉತ್ತರ ವಲಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆ ಉದ್ದಕ್ಕೂ ಬಲವಾದ ಜಾಗರೂಕತೆಯನ್ನ ಕಾಪಾಡಿಕೊಳ್ಳುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಸೇನೆಗೆ ಸೂಚಿಸಿದ್ದಾರೆ.
ಆರ್ಮಿ ಕಮಾಂಡರ್ಸ್ ಕಾನ್ಫರೆನ್ಸ್ನಲ್ಲಿ ಮಾಡಿದ ಭಾಷಣದಲ್ಲಿ, ಸಿಂಗ್, ನಿರ್ದಿಷ್ಟ ಉಲ್ಲೇಖಗಳನ್ನ ಮಾಡದೆ, ವಿಶ್ವದಾದ್ಯಂತ ಭೌಗೋಳಿಕ-ರಾಜಕೀಯ ಬದಲಾವಣೆಗಳನ್ನ ಗಮನಿಸಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಯೋಜನೆ ಮತ್ತು ಕಾರ್ಯತಂತ್ರಗಳನ್ನ ರೂಪಿಸಲು ಸಶಸ್ತ್ರ ಪಡೆಗಳಿಗೆ ಕರೆ ನೀಡಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.
“ಉತ್ತರ ವಲಯದಲ್ಲಿ ಪಿಎಲ್ಎ ಪಡೆಗಳ ನಿಯೋಜನೆಯಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಎಲ್ಎಸಿಯ ಭದ್ರತೆಯನ್ನು ಕಾಪಾಡಿಕೊಳ್ಳಲು ನಮ್ಮ ಸಶಸ್ತ್ರ ಪಡೆಗಳು, ವಿಶೇಷವಾಗಿ ಭಾರತೀಯ ಸೇನೆಯು ನಿರಂತರವಾಗಿ ತಮ್ಮ ಜಾಗರೂಕತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ” ಎಂದು ಅವರು ಮೂಲಗಳು ತಿಳಿಸಿವೆ.