ಹೆಬ್ರಿ: ಚುನಾವಣಾ ಕಾವು ದಿನೇದಿನೇ ಹೆಚ್ಚುತ್ತಿದ್ದು ಈ ನಡುವೆ ರಾಜಕೀಯ ನಾಯಕರ ಹಾಗೂ ಕಾರ್ಯಕರ್ತರ ಪಕ್ಷಾಂತರ ಪರ್ವ ಜೋರಾಗಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಲ್ಲಾಳಿ ವಾರ್ಡ್ ನಿಂದ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತರಾದ ಪ್ರವೀಣ್ ಆಚಾರ್ಯ, ನಾಗರಾಜ ನಾಯಕ್ ಮತ್ತು ರಾಜೇಶ್ ನಾಯ್ಕ್ ಭಾನುವಾರ ಶಾಸಕ ವಿ.ಸುನಿಲ್ ಕುಮಾರ್ ರವರ ಸಮ್ಮುಖದಲ್ಲಿ ವಿಕಾಸ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಸುನಿಲ್ ಕುಮಾರ್ ಬಿಜೆಪಿ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಹೆಬ್ರಿಯ ಬಿಜೆಪಿ ಪ್ರಮುಖರಾದ ಗುರುದಾಸ ಶೆಣೈ, ಜಯಕರ ಪೂಜಾರಿ, ಎಚ್.ಕೆ. ಸುಧಾಕರ, ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್ ಪೂಜಾರಿ , ಜ್ಯೋತಿ ಹರೀಶ್ ಉಪಸ್ಥಿತರಿದ್ದರು.