Share this news

ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡದಲ್ಲಿ ಮಾವೋವಾದಿಗಳು ನಡೆಸಿದ  ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಯಲ್ಲಿ 10 ಪೊಲೀಸ್,  ಒಬ್ಬ ಚಾಲಕ ಬಲಿಯಾಗಿದ್ದಾರೆ. ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸರು ಪ್ರಯಾಣಿಸುತ್ತಿದ್ದಾಗ ಸುಧಾರಿತ ಸ್ಫೋಟಕ ಸಾಧನ (ಐಇಡಿ)ದಿಂದ ಅವರ ವಾಹನವನ್ನು ಸ್ಫೋಟಗೊಳಿಸಿದ್ದಾರೆ. ಈ ಸ್ಫೋಟದಿಂದ ಹತ್ತು ಪೊಲೀಸರು ಮತ್ತು ಒಬ್ಬ ಚಾಲಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರ ಮಾವೋವಾದಿ ವಿರುದ್ಧ ಕಾರ್ಯಾಚರಣೆ ನಡೆಸಿ ಪೊಲೀಸರು ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಈ ಪೊಲೀಸರು ಜಿಲ್ಲಾ ಮೀಸಲು ಗಾರ್ಡ್ (DRG)ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗಿದೆ. ಛತ್ತೀಸ್‌ಗಢ ಪೋಲಿಸ್‌ನ ವಿಶೇಷ ಪಡೆಯಾಗಿದ್ದು, ಇದು ಮಾವೋವಾದಿಗಳನ್ನು ಎದುರಿಸಲು ವಿಶೇಷ ತರಬೇತಿಯನ್ನು ಪಡೆದುಕೊಂಡಿದೆ. ಈ ಕಾರ್ಯಚರಣೆಯಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದವರನ್ನು ಕೂಡ ಬಳಸಿಕೊಳ್ಳುತ್ತಾರೆ.

ನಕ್ಸಲರೆಂದು ಕರೆಯಲ್ಪಡುವ ಮಾವೋವಾದಿಗಳು ಆರು ದಶಕಗಳಿಂದ ನೂರಾರು ಜನರನ್ನು ಕೊಂದ ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯವನ್ನು ನಡೆಸಿದ್ದಾರೆ. ದೇಶದ ಆರ್ಥಿಕ ಉತ್ಕರ್ಷದಿಂದ ಹೊರಗುಳಿದಿರುವ ಬಡವರ ಪರವಾಗಿ ಅವರು ಹೋರಾಡುತ್ತಿದ್ದಾರೆ ಎಂದು ಮಾವೋವಾದಿಗಳು ಹೇಳುತ್ತಾರೆ.

1967ರಿಂದ ದೇಶದ ಆಂತರಿಕ ಭದ್ರತೆಗೆ ಮಾವೋವಾದಿಗಳು ದೊಡ್ಡ ಸಮಸ್ಯೆಯಾಗಿದೆ. ಈ ಮಾವೋವಾದಿಗಳು ದಟ್ಟವಾದ ಕಾಡುಗಳಲ್ಲಿ ವಾಸವಾಗಿದ್ದು, ಭಾರತೀಯ ಆಡಳಿತ ಮತ್ತು ಪಡೆಗಳ ವಿರುದ್ಧ ಅವರ ಕಾರ್ಯಾಚರಣೆ ನಡೆಸುತ್ತಾರೆ ಎಂದು ಹೇಳಿದೆ.

 

Leave a Reply

Your email address will not be published. Required fields are marked *