Share this news

ಕಾರ್ಕಳ : ಪುರಸಭೆ ಆಡಳಿತಾಧಿಕಾರಿ ಹಾಗೂ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಹಾಗೂ ಪುರಸಭಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೆಂದು ಆರೋಪಿಸಿ ಬಿಜೆಪಿ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

ಮುಂಡ್ಲಿ ಜಲಾಶಯದ ನೀರನ್ನು ಖಾಸಗಿ ವಿದ್ಯುತ್ ಕಂಪನಿಯು ಬೇಕಾಬಿಟ್ಟಿಯಾಗಿ ದುರ್ಬಳಕೆ ಮಾಡುತ್ತಿದೆ ಇದರಿಂದ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಕಾರ್ಕಳದ ಪುರಸಭಾ ಕಛೇರಿಯ ಮುಖ್ಯಾಧಿಕಾರಿ ಛೇಂಬರ್ ಮುಂಭಾಗದಲ್ಲಿ ದರಣಿ ನಡೆಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಪುರ ಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರದೀಪ್, ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಆಡಳಿತಾದಿಕಾರಿಗಳು ಪುರಸಭೆಗೆ ಬಾರದೇ ಪ್ರವಾಸಿ ಮಂದಿರದಲ್ಲಿಯೇ ಕಡತಗಳಿಗೆ ಸಹಿ ಹಾಕಿ ತೆರಳುತ್ತಾರೆ ಯಾವುದೇ ವಿಚಾರದಲ್ಲಿ ಪುರಸಭಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೆಂದು ಆರೋಪಿಸಿದರು.
ಕಳೆದ ಬೇಸಿಗೆಯಲ್ಲಿ 50 ಲಕ್ಷ ರೂಪಾಯಿ ಕೇವಲ ಟ್ಯಾಂಕರ್ ಗಳಲ್ಲಿ ವಾರ್ಡಗಳಿಗೆ ನೀರು ಸರಬರಾಜು ಮಾಡಲು ವ್ಯಯಿಸಲಾಗಿದೆ ಈ ಬಾರಿಯೂ ಖಾಸಗಿ ಜಲ ವಿದ್ಯುತ್
ಕಂಪೆನಿಯಿಂದಾಗಿ ಸಮಸ್ಯೆ ಉಲ್ಬಣವಾಗಲಿದೆ.ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಪುರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ಗಿಡಗಂಟಿಗಳು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಈ ಕುರಿತು ಹಲವಾರು ಬಾರಿ ಮನವಿ ನೀಡಿದರೂ ಕೆಲಸ ನಿರ್ವಹಿಸಲು ಟೆಂಡರ್ ಆಹ್ವಾನಿಸಿಲ್ಲ, ನಾವು ಪ್ರತಿಭಟನೆಗೆ ಕುಳಿತಿದ್ದರೂ ಅಧಿಕಾರಿಗಳು ನಮ್ಮನ್ನು ವಿಚಾರಿಸಿಲ್ಲ ಅಧಿಕಾರಿಗಳಿಂದಾಗಿ ವಾರ್ಡಗಳ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿದೆ. ಕಳೆದ 7 ತಿಂಗಳಿಂದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ನಡೆಯದೇ ಇದ್ದು ಕೌನ್ಸಿಲ್ ಸಭೆಗಳು ನಡೆಯದೇ ತುಂಬಾ ತೊಂದರೆಯಾಗುತ್ತಿದೆ ಇದರಿಂದಾಗಿ ಸದಸ್ಯರುಗಳಾದ ನಾವುಗಳು ಈ ಪರಿಸ್ಥಿತಿ ಅನುಭವಿಸುತ್ತಿದ್ದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ , ಸದಸ್ಯೆ
ಸುಮಾ ಕೇಶವ್, ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ,ಸದಸ್ಯ
ಯೋಗೀಶ್ ದೇವಾಡಿಗ ಮಾಜಿ ಉಪಾಧ್ಯಕ್ಷೆ ಪಲ್ಲವಿ ಸದಸ್ಯರುಗಳಾದ ಭಾರತೀ ಅಮೀನ್ ,ಪ್ರಶಾಂತ್ ಕೋಟ್ಯಾನ್ , ಶಶಿಕಲಾ ಶೆಟ್ಟಿ , ನೀತಾ ಆಚಾರ್ಯ ,ಮಮತಾ ಪೂಜಾರಿ ಉಪಸ್ಥಿತರಿದ್ದರು

 

 

 

 

 

 

 

 

 

Leave a Reply

Your email address will not be published. Required fields are marked *