Share this news

ನವದೆಹಲಿ: ಜ್ವರವಿರಲಿ, ಕೆಮ್ಮು-ಶೀತವಿರಲಿ ಅಥವಾ ತಲೆನೋವೇ ಇರಲಿ ಹೆಚ್ಚಿನವರು ತಕ್ಷಣ ತೆಗೆದುಕೊಳ್ಳುವುದು ಪ್ಯಾರಸಿಟಮಾಲ್. ವೈದ್ಯರ ಬಳಿ ಹೋದ್ರೆ ಎಕ್ಸ್‌ರೇ, ಸ್ಕ್ಯಾನಿಂಗ್ ಎಂದು ಸಿಕ್ಕಾಪಟ್ಟೆ ಫೀಸ್ ಹಾಕ್ತಾರೆ ಎಂದುಕೊಂಡು ಹೆಚ್ಚಿನವರು ಸುಲಭವಾಗಿ ಪ್ಯಾರಾಸಿಟಮಮಾಲ್‌ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ. ಯಾವುದೇ ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಈ ಟ್ಯಾಬ್ಲೆಟ್‌ನ್ನು ಮೆಡಿಕಲ್‌ನಿಂದ ಪಡೆದು ಜ್ವರವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಲವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಈ ಪ್ಯಾರಾಸಿಟಮಾಲ್ ಔಷಧಿಯ ಬೆಲೆ ಪರಿಷ್ಕರಣೆಯಾಗಿದೆ.

ಔಷಧ  ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಪ್ರತಿಜೀವಕಗಳು ಮತ್ತು ಆಂಟಿವೈರಲ್ ಔಷಧಿಗಳು ಸೇರಿದಂತೆ 128 ಔಷಧಿಗಳ ಬೆಲೆಯನ್ನ ಪರಿಷ್ಕರಿಸಿದೆ. ಬೆಲೆಗಳನ್ನು ಪರಿಷ್ಕರಿಸಲಾದ ಔಷಧಿಗಳಲ್ಲಿ ಅಮೋಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಮ್ಲದ ಪ್ರತಿಜೀವಕ ಚುಚ್ಚುಮದ್ದು ಗಳು ಸಹ ಸೇರಿವೆ. ವ್ಯಾಂಕೊಮೈಸಿನ್, ಅಸ್ತಮಾ ಔಷಧಿ ಸಾಲ್ಬುಟಮಾಲ್, ಕ್ಯಾನ್ಸರ್ ಔಷಧಿ ಟ್ರಾಸ್ಟುಜುಮಾಬ್, ಮೆದುಳಿನ ಗೆಡ್ಡೆ ಚಿಕಿತ್ಸೆ ಔಷಧ ಟೆಮೊಜೊಲೊಮೈಡ್, ನೋವು ನಿವಾರಕ ಇಬುಪ್ರೊಫೇನ್, ನೋವು ಮತ್ತು ಜ್ವರಕ್ಕೆ ಬಳಸುವ ಪ್ಯಾರಸಿಟಮಾಲ್ ಬೆಲೆಗಳನ್ನ ಎನ್ಪಿಪಿಎ ಪರಿಷ್ಕರಿಸಿದೆ.

 

Leave a Reply

Your email address will not be published. Required fields are marked *