Share this news

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಜಾತಿಗಣತಿ ವರದಿಯ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯನವರ ನಿಲುವು ಸ್ಪಷ್ಟವಾಗಿಲ್ಲ, ತಮ್ಮ ವೈಯುಕ್ತಿಕ ರಾಜಕೀಯ ಲಾಭಕ್ಕಾಗಿ ಜಾತಿಗಣತಿಯನ್ನು ಅಸ್ತçವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಜಾತಿಗಣತಿ ವರದಿಯ ಕುರಿತು ಟ್ವೀಟ್ ಮಾಡಿರುವ ಸುನಿಲ್ ಕುಮಾರ್, ಮಾನ್ಯ ಸಿದ್ದರಾಮಯ್ಯನವರೇ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ವರದಿ ಸ್ವೀಕಾರದ ವಿಚಾರದಲ್ಲಿ ನೀವು ದಿನಕ್ಕೊಂದು ನಿಲುವು ತಾಳುವುದನ್ನು ನಿಲ್ಲಿಸಿ.ವರದಿ ಸ್ವೀಕರಿಸುವ ವಿಚಾರದಲ್ಲಿ ನನ್ನ ನಿಲುವು ಅಚಲ ಎಂದು ಪ್ರತಿಪಾದಿಸುತ್ತಲೇ ನೀವು ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಜಾತಿವರದಿಯನ್ನು ಕೇವಲ ರಾಜಕೀಯ ಅಸ್ತ್ರವಾಗಿಸಿಕೊಂಡು ದಿನದೂಡುವ ಬದಲು ಸಾರ್ವಜನಿಕವಾಗಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುವುದಕ್ಕಾದರೂ ಸರ್ಕಾರ ವೇದಿಕೆ ಸೃಷ್ಟಿಸಲಿ. ವರದಿಯ ವೈಜ್ಞಾನಿಕತೆಯ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಸವಾಲು ಹಾಕಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಗುರಾಣಿಯಾಗಿಸಿಕೊಂಡು ನೀವು ಸ್ವಪಕ್ಷೀಯರ ವಿರೋಧವನ್ನು ತಪ್ಪಿಸಿಕೊಳ್ಳಲು ಹವಣಿಸುತ್ತಿರಬಹುದು. ಆದರೆ ಹಿಂದುಳಿದ ವರ್ಗ ಹಾಗೂ ಸಮಾಜದಲ್ಲಿ ಅನಪೇಕ್ಷಿತ ಗೊಂದಲ ಹಾಗೂ ಅನುಮಾನವನ್ನು ಸೃಷ್ಟಿಸಬೇಡಿ ಎಂದು ಟ್ವಿಟರ್ ನಲ್ಲಿ ಸಿಎಂ ವಿರುದ್ಧ ಸುನಿಲ್ ಕುಮಾರ್ ಕುಟುಕಿದ್ದಾರೆ

 

Leave a Reply

Your email address will not be published. Required fields are marked *