ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೊದಲ ವಿಧಾನಸಭೆಯ ಅಧಿವೇಶನ ಜುಲೈ.3ರಿಂದ ಜುಲೈ.14ರವರೆಗೆ ನಡೆಸಲು ನಿಗದಿ ಪಡಿಸಲಾಗಿದೆ.ಇಂದು ಈ ಬಗ್ಗೆ ಅಧಿಕೃತ ಆದೇಶವನ್ನು ಪ್ರಕಟಿಸಿರುವಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು, ಕರ್ನಾಟಕ ವಿಧಾನಸಭೆಯು ಜುಲೈ 3 ರಂದು ಸೋಮವಾರ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ ಎಂದಿದ್ದಾರೆ.

16ನೇ ವಿಧಾನಸಭೆಯ ಒಂದನೇ ಅಧಿವೇಶನ ಮುಂದುವರೆದ ಉಪವೇಶನದ ಕಾರ್ಯಕಲಾಪಗಳನ್ನು ಜುಲೈ 3 ರಿಂದ ಜುಲೈ 14ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.ಕರ್ನಾಟಕ ವಿಧಾನಸಭೆಯ ನಿಯಮ 42 ಮತ್ತು 45ರ ಅಡಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯ ಪ್ರಶ್ನೆಗಳು, ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ ಎಂದಿದ್ದಾರೆ.

ಶಾಸಕರು ಪ್ರಶ್ನೆಗಳ ಸೂಚನಾ ಪತ್ರಗಳನ್ನು ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ. ಜೂನ್ 21 ಪ್ರಶ್ನೆಗಳ ಸೂಚನಾ ಪ್ರಶ್ನೆಗಳ ಸೂಚನಾ ಪತ್ರಗಳ ಬ್ಯಾಲೆಟ್ ನಡೆಸುವ ಕೊನೆಯ ದಿನವಾಗಿದೆ. ಎಂದಿದ್ದಾರೆ. ಇದೇ ರೀತಿ ಇತರೆ ದಿನಗಳಿಗೆ ಕೊನೆ ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ.
