ಉಡುಪಿ : ಡಾ. ಯು.ಕೃಷ್ಣ ಮುನಿಯಾಲ್ ಮೆಮೊರಿಯಲ್ ಟ್ರಸ್ಟ್ (ರಿ) ಇವರ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕಳೆದ 25 ವರ್ಷಗಳಿಂದ ವೈದ್ಯಕೀಯ ರಂಗದಲ್ಲಿ ಸಾವಿರಾರು ರೋಗಿಗಳಿಗೆ ಪ್ರಾಚೀನ ಆಯುರ್ವೇದ ಶಾಸ್ತ್ರದಿಂದ ಸೇವೆ ಸಲ್ಲಿಸಿ ಆಶಾಕಿರಣವಾಗಿದೆ .
ಇದೀಗ ರಜತ ಮಹೋತ್ಸವ ಸಂಭ್ರಮದಲ್ಲಿರುವ ಮುನಿಯಾಲ್ ಆಯುರ್ವೇದ ಆಸ್ಪತ್ರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಭಾಗವಾಗಿ ಉಚಿತ ತಪಾಸಣಾ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಜುಲೈ.1 ರಿಂದ 7 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಅಪರಾಹ್ನ 4 ರವರೆಗೆ ಮಣಿಪಾಲ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ, ಎರಡನೇ ಭೇಟಿಯಲ್ಲಿ ಔಷಧಿಗಳ ಮೇಲೆ 50% ರಿಯಾಯಿತಿ, ಮೊದಲ ಬಾರಿಗೆ ಹಿರಣ್ಯಪ್ರಾಶ ಹಾಕಿಸುತ್ತಿರುವ ಮಕ್ಕಳಿಗೆ ಜುಲೈ ತಿಂಗಳಿನಲ್ಲಿ ಉಚಿತವಾಗಿ ನೀಡಲಾಗುತ್ತದೆ, ರಿಯಾಯಿತಿಯಲ್ಲಿ ಪಂಚಕರ್ಮ, ಲ್ಯಾಬ್ ಪರೀಕ್ಷೆಗಳು, ಎಕ್ಸರೇ ಮತ್ತು ಇಸಿಜಿ, ಫಿಸಿಯೋಥೆರಪಿಗೆ ಶೇ.20 ರಿಯಾಯಿತಿ, ಉಚಿತ ಪಥ್ಯಾಹಾರ ಮತ್ತು ಯೋಗ ಸಲಹೆಗಳು ಹಾಗೂ ಒಳರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 8123403233 ಅನ್ನು ಸಂಪರ್ಕಿಸಬಹುದು
ಎಂದು ಪ್ರಕಟಣೆ ತಿಳಿಸಿದೆ.


