ಮಂಗಳೂರು: ಹಿಂದೂ ರಾಷ್ಟ ಸ್ಥಾಪನೆಯ ಕಾರ್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ವರ್ಷಂಪ್ರತಿಯAತೆ ಈ ಬಾರಿಯೂ ಜೂನ್ 16 ರಿಂದ 22ರವರೆಗೆ ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ 11 ನೇ ಅಖಿಲ ಭಾರತೀಯ ಹಿಂದೂ ರಾಷ್ಟ ಅಧಿವೇಶನ ಅಂದರೆ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಆಯೋಜಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಹೇಳಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಗೋವಾದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿರುವ `ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ದಿಂದ ಹಿಂದೂ ರಾಷ್ಟ್ರದ ಚರ್ಚೆ ಈಗ ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವ ಮಟ್ಟದಲ್ಲಿ ಆರಂಭವಾಗಿದೆ. ಈ ನಡುವೆ ಹಿಂದೂ ರಾಷ್ಟ್ರದ ಬೇಡಿಕೆಯಿಡುವ ಅನೇಕ ವೇದಿಕೆಗಳು ನಿರ್ಮಾಣವಾಗಿವೆ. ಮತ್ತೊಂದೆಡೆ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಸಮರ್ಥನೆ ಮಾಡುವವರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂಧಿಸಲಾಗುತ್ತಿದೆ. ಪಂಜಾಬ್‌ನಲ್ಲಿ ಖಲಿಸ್ಥಾನವಾದಿಗಳು ಪೋಲೀಸ್ ಮತ್ತು ಸರಕಾರಕ್ಕೆ ಬೆದರಿಕೆಯನ್ನು ನೀಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿದ್ದಾರೆ, ಮಣಿಪುರ್, ನಾಗಾಲ್ಯಾಂಡ್‌ನAತಹ ರಾಜ್ಯಗಳಲ್ಲಿನ ಹಿಂದೂಗಳ ಮನೆಗಳನ್ನು ಸುಡಲಾಗುತ್ತಿದೆ. ಕಾಶ್ಮೀರದಲ್ಲಿ ಕಲಂ 370 ರದ್ದುಗೊಳಿಸಿದರು. ಆದರೂ ಅಲ್ಲಿಯ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದರು.

ಲವ್ ಜಿಹಾದಿಗಳಿಂದ ದೇಶಾದ್ಯಂತ ಸಾಕ್ಷಿ, ಅನುರಾಧ, ಶ್ರದ್ಧಾ ವಾಲ್ಕರ್ ನಂತಹ ಅನೇಕ ಹಿಂದೂ ಹುಡುಗಿಯರ ಭೀಕರ ಹತ್ಯೆಗಳನ್ನು ನೋಡಿದರೆ ದೇಶದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. `ದಿ ಕೇರಳ ಸ್ಟೋರಿ’ ಈ ಚಲನಚಿತ್ರದಲ್ಲಿ ಮಂಡಿಸಿರುವ ವಾಸ್ತವ ಕೇವಲ ಕೇರಳಕ್ಕಷ್ಟೇ ಸೀಮಿತವಾಗಿರದೆ, ಈ ಜಿಹಾದಿ ಷಡ್ಯಂತ್ರದ ವ್ಯಾಪ್ತಿ ದೇಶಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಬಹಿರಂಗವಾಗಿದೆ. ಮತ್ತೊಂದೆಡೆ ಹಿಂದೂಗಳು ಭಾಷಣ ಮಾಡಿದರೆ ಕೂಡಲೇ ಅವರ ಮೇಲೆ `ಧ್ವೇಷ ಭಾಷಣ ನೆಪದಲ್ಲಿ ದೂರು ದಾಖಲಾಗುತ್ತದೆ; ಆದರೆ `ಸರ್ ತನ್ ಸೇ ಜುದಾ’ ಮಾಡುವುದರ ಬಗ್ಗೆ ಬಹಿರಂಗವಾಗಿ ಘೋಷಿಸುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಕಾಣಿಸುತ್ತಿಲ್ಲ ಎಂದರು.
ಸನಾತನ ಸಂಸ್ಥೆಯ ಲಕ್ಷ್ಮಿ ಪೈ ಮಾತನಾಡಿ ,ಈ ಬಾರಿಯ ಅಧಿವೇಶನದಲ್ಲಿ ಹಿಂದೂ ರಾಷ್ಟ್ರ ಸಂಸದ್ ಈ ವೈಶಿಷ್ಟ್ಯ ಪೂರ್ಣ ಸತ್ರದ ಆಯೋಜನೆ ಮಾಡಲಾಗಿದೆ. ವಿವಿಧ ವಿಷಯಗಳ ಬಗ್ಗೆ ವಿಶೇಷತಜ್ಞರ ಚರ್ಚಾಕೂಟ, ವಿಶೇಷ ಕಾರ್ಯ ಮಾಡುವ ಗೌರವಾನ್ವಿತರ ಸಂದರ್ಶನವೂ ಈ ಬಾರಿಯ ಅಧಿವೇಶನದ ವಿಶೇಷ ಆಕರ್ಷಣೆಯಾಗಿರಲಿದೆ. `ಲವ್ ಜಿಹಾದ್, `ಹಲಾಲ್ ಸರ್ಟಿಫಿಕೇಷನ್, `ಲ್ಯಾಂಡ್ ಜಿಹಾದ್, `ಕಾಶಿ-ಮಥುರಾ ಮುಕ್ತಿ , `ಮತಾಂತರ, `ಗೋಹತ್ಯೆ, `ಕೋಟೆ ದೇವಸ್ಥಾನಗಳ ಮೇಲಿನ ಇಸ್ಲಾಮಿ ಅತಿಕ್ರಮಣ, `ದೇವಸ್ಥಾನ ಸಂಸ್ಕೃತಿಯ ರಕ್ಷಣೆ, `ಕಾಶ್ಮೀರಿ ಹಿಂದೂಗಳ ಪುನರ್ವಸತಿ, `ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರ, ಈ ರೀತಿಯ ವಿವಿಧ ವಿಷಯಗಳ ಜೊತೆಗೆ ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಅವಶ್ಯಕ ವಿಷಯಗಳ ಮೇಲೆ ಈ ಮಹೋತ್ಸವದಲ್ಲಿ ವಿಚಾರ ವಿನಿಮಯ ನಡೆಯಲಿದೆ ಎಂದರು.

ದಿನೇಶ್ ಜೈನ್ ಮಾತನಾಡಿ, ಅಖಿಲ ಭಾರತ ಹಿಂದೂ ಅಧಿವೇಶನವು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವೈಶಿಷ್ಟ್ಯವಾಗಿ ನಡೆಯಲಿದೆ. ಇಡೀ ಜಗತ್ತಿನಲ್ಲಿ ಹಿಂದೂ ರಾಷ್ಟ್ರ ತರುವ ದೃಷ್ಟಿಯಲ್ಲಿ ನಾವೆಲ್ಲರೂ ಪ್ರಯತ್ನವನ್ನು ಮಾಡೋಣ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ ಅವಶ್ಯಕತೆ ಇದೆ ಎಂದು ಹೇಳಿದರು.
ರೈತ ಸಂಘದ ಉಪಾಧ್ಯಕ್ಷರಾದ ಗಿರೀಶ್ ಕೊಟ್ಟಾರಿ ಉಪಸ್ಥಿತರಿದ್ದರು.

ಈ ಅಧಿವೇಶನದ ನೇರಪ್ರಸಾರ ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ HinduJagruti. org ಮೂಲಕ, ಹಾಗೂ ಸಮಿತಿಯ Hindu Jagruti. ಯೂಟ್ಯೂಬ್ ಚಾನೆಲ್ ಮತ್ತು @HinduJagruti. org ಈ ಟ್ವಿಟರ್ ಹ್ಯಾಂಡಲ್ ಮೂಲಕ ನಡೆಯಲಿದೆ. ಜಗತ್ತಿನಾದ್ಯಂತ ಇರುವ ಹಿಂದುತ್ವನಿಷ್ಠರು ಈ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಲಾಭ ಪಡೆಯಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.



