ಕಾರ್ಕಳ: ಅತ್ತೂರು ಪರ್ಪಲೆಗಿರಿಯ ಕಲ್ಕುಡ ದೈವಸ್ಥಾನದ ಪುನರುತ್ಥಾನದ ಪ್ರಯುಕ್ತ ಜೂನ್ 21ರಂದು ಶಿಲಾಪೂಜೆ ಹಾಗೂ ಮೆರವಣಿಯು ನಡೆಯಲಿದೆ.
ಜೂನ್ 21ರಂದು ಕ್ಷೇತ್ರದ ತಂತ್ರಿವರೇಣ್ಯರ ಮಾರ್ಗದರ್ಶನ ಮತ್ತು ಹಿಂದೂ ಧಾರ್ಮಿಕ ಮುಖಂಡರ, ವಿವಿಧ ಸಂಘ ಸಂಸ್ಥೆಗಳ ಹಿರಿಯರ, ಊರಿನ ಗಣ್ಯರ ಹಾಗೂ ಹಿಂದೂ ಸಮಾಜದ ದೈವ ಭಕ್ತ ಬಂಧುಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಮುಂಜಾನೆ 7-30ಕ್ಕೆ ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವರ ಪುಣ್ಯಪ್ರಸಾದ ಸ್ವೀಕರಿಸುವ ಮೂಲಕ ಶಿಲಾಯಾತ್ರೆಯ ಮೆರವಣಿಗೆ ಚಾಲನೆಗೊಳ್ಳಲಿದ್ದು ನಂತರ ದೈವಿಕ ಶಿಲೆಯ ಮೆರವಣಿಗೆ ವೆಂಕಟರಮಣ ದೇವಸ್ಥಾನದಿಂದ ಹೊರಟು ಕಾರ್ಕಳ ಮಾರಿಗುಡಿ, ಅನಂತಶಯನ ದೇವಸ್ಥಾನ, ಗೊಮ್ಮಟೇಶ್ವರ ಬೆಟ್ಟ, ಆನೆಕೆರೆ ಶ್ರೀ ಕೃಷ್ಣ ದೇವಸ್ಥಾನ , ಬಾಲಾಜಿ ಅಯ್ಯಪ್ಪ ಶಿಬಿರ, ದೂಪದಕಟ್ಟೆ ಮಾರ್ಗವಾಗಿ ಅತ್ತೂರು ಪರ್ಪಲೆಗಿರಿಗೆ ತಲುಪಲಿದೆ.

