ಕ್ಯಾಲಿಫೋರ್ನಿಯಾ: ಜಗತ್ತಿನ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿರುವ ಎಲಾನ್ ಮಸ್ಕ್ ಜಗತ್ತಿನ ಅತ್ಯಂತ ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ಟ್ವಿಟರ್ ಕಂಪನಿಯನ್ನು ಖರೀದಿಸಿದ ಬಳಿಕ ಇದೀಗ ಟ್ವಿಟರ್ ಲೋಗೋ ವನ್ನು ಬದಲಿಸುವ ಮೂಲಕ ಟ್ವಿಟರ್ ಗೆ ಹೊಸರೂಪ ಕೊಟ್ಟಿದ್ದಾರೆ.
ಸಾಕಷ್ಟು ಜನಪ್ರಿಯತೆ ಹೊಂದಿರುವ ಟ್ವಿಟರ್ ನ ನೀಲಿ ಹಕ್ಕಿಗೆ ಕೋಕ್ ಕೊಟ್ಟಿರುವ ಮಸ್ಕ್ ಇದೀಗ ಆಂಗ್ಲಭಾಷೆಯ X ಎಂಬ ಅಕ್ಷರವನ್ನು ಟ್ವಿಟರ್ ಲೋಗೋವೆಂದು ಘೋಷಿಸಿ ಅನಾವರಣಗೊಳಿಸಿದ್ದಾರೆ.
ಮೈಕ್ರೋ ಬ್ಲಾಗಿಂಗ್ ಫ್ಲಾಟ್ ಫಾರ್ಮನ್ನು ಸಂಕ್ಷಿಪ್ತವಾಗಿ X ಎಂದು ಕರೆಯಲಾಗುತ್ತದೆ,ಜನರಿಗೆ ಹೊಸತನವನ್ನು ಕೊಡುವ ಮೂಲಕ ಟ್ವಿಟರ್ ಇನ್ನಷ್ಟು ಜನಪ್ರಿಯತೆಗೊಳಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಟ್ವಿಟರ್ ಸಿಇಓ ಲಿಂಡಾ ಯಾಕರಿನೊ ಸ್ಪಷ್ಟಪಡಿಸಿದ್ದಾರೆ
ಈಗಾಗಲೇ ಒಂದುಬಾರಿ ಟ್ವಿಟರ್ ನ ಅಧಿಕೃತ ಲೋಗೋವಾಗಿದ್ದ ನೀಲಿಹಕ್ಕಿಯನ್ನು ಬದಲಿಸಿದ ಪರಿಣಾಮ ಟ್ವಿಟರ್ ಜನಪ್ರಿಯತೆ ಕುಸಿದಿತ್ತು ಬಳಿಕ ನೀಲಿಹಕ್ಕಿ ಲೋಗೋ ಮರುಸ್ಥಾಪಿಸಲಾಗಿತ್ತು.ಇದೀಗ ಮತ್ತೆ ಟ್ವಿಟರ್ ಗೂಡಿನಿಂದ ನೀಲಿಹಕ್ಕಿಯನ್ನು ಹೊರದಬ್ಬಲಾಗಿದ್ದು ನೆಟ್ಟಿಗರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದುನೋಡಬೇಕಿದೆ