Share this news

ಸ್ಯಾನ್ ಫ್ರಾನ್ಸಿಸ್ಕೊ: ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಇತ್ತೀಚೆಗೆ ಮಸ್ಕ್ ಟ್ವಿಟರ್ ಲೋಗೋವನ್ನು ಬದಲಿಸಿದ್ದಾರೆ. ನೀಲಿ ಹಕ್ಕಿಯ ಮೂಲಕ ಸಂದೇಶ ತರುತ್ತಿದ್ದ ಟ್ವಿಟರ್ X ಲೋಗೋ ನೂತನ ಚಿಹ್ನೆಯಾಗಿ ಬಳಸಿಕೊಂಡಿತ್ತು. ನೀಲಿ ಹಕ್ಕಿಯನ್ನು ಹಾರಿಬಿಟ್ಟ ಮಸ್ಕ್ ಮತ್ತೆ ಟ್ರೋಲ್ ಆಗಿದ್ದರು. ಟ್ರೋಲ್, ಮೀಮ್ಸ್ ಬೆನ್ನಲ್ಲೇ ಎಲಾನ್ ಮಸ್ಕ್ ಹಲವು ಸಂಕಷ್ಟ ಎದುರಿಸಿದ್ದಾರೆ. ಹೊಸ ಲೋಗೋ ಬಿಡುಗಡೆ ಮಾಡಿದ ಬಳಿಕ ಟ್ವಿಟರ್ ಪ್ರಧಾನ ಕಚೇರಿ ಮೇಲ್ಬಾಗದಲ್ಲಿ ದೊಡ್ಡ ಗಾತ್ರದ X ಲೋಗೋ ಅಳವಡಿಸಲಾಗಿತ್ತು. ಆದರೆ ಸ್ಥಳೀಯರ ದೂರು, ಪೊಲೀಸರ ವಾರ್ನಿಂಗ್ ಬಳಿಕ ಕಚೇರಿಯ ಮೇಲಿನ ನೂತನ ಲೋಗೋವನ್ನು ತೆಗೆದು ಹಾಕಲಾಗಿದೆ.

ಹೊಸ ಲೋಗೋ ಅನಾವರಣ ಬೆನ್ನಲ್ಲೇ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಪ್ರಧಾನ ಕಚೇರಿ ಮೇಲೆ ದೊಡ್ಡ ಗಾತ್ರದ X ಲೋಗೋ ಅಳವಡಿಸಲಾಗಿತ್ತು. ಎಲ್‌ಇಡಿ ಲೈಟ್ ಮೂಲಕ ಹೊಳೆಯುವ ಈ ಲೋಗೋ ಅದೆಷ್ಟೇ ದೂರಕ್ಕೂ ಕಾಣುವ ರೀತಿಯಲ್ಲಿ ಅಳವಡಿಕೆ ಮಾಡಲಾಗಿತ್ತು.

ಪ್ರಕಾಶಮಾನವಾದ ಎಲ್‌ಇಡಿ ಲೈಟ್ ಬಳಕೆಯಿಂದ ಸ್ಛಳೀಯ ನಿವಾಸಿಗಳಿಗೆ ಕಿರಿಕಿರಿಯಾಗಿದೆ. ರಾತ್ರಿ ವೇಳೆ ನಿದ್ದೆ ಮಾಡಲು ಆಗುತ್ತಿಲ್ಲ. ಪ್ರಕಾಶಮಾನವಾದ ಬೆಳಕಿನಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಟ್ವಿಟರ್ ಲೋಗೋವನ್ನು ತೆಗೆಯಬೇಕು ಎಂದು ಸ್ಥಳೀಯರು ದೂರು ದಾಖಲಿಸಿದ್ದಾರೆ. ಈ ಟ್ವಿಟರ್ ಲೋಗೋವನ್ನು ಕಟ್ಟಡದ ಅಂಚಿನಲ್ಲಿ ಅಳವಡಿಸಲಾಗಿದೆ. ಗಗನ ಚುಂಬಿ ಕಟ್ಟದ ಅಂಚಿನಲ್ಲಿರುವ ಈ ಲೋಗೋ ಬಿರುಗಾಳಿ ಅಥವಾ ಇತರ ಕಾರಣಗಳಿಂದ ಕೆಳಕ್ಕೆ ಬಿದ್ದರೆ ಅಪಾಯ ಹೆಚ್ಚು. ಹೀಗಾಗಿ ಲೋಗೋ ತೆರೆವುಗೊಳಿಸಬೇಕು ಎಂದು ಬರೋಬ್ಬರಿ 24 ದೂರುಗಳು ದಾಖಲಾಗಿದೆ.

ದೂರಿನ ಬಳಿಕ ಬಿಲ್ಡಿಂಗ್ ನಿರ್ವಹಣಾ ಅಧಿಕಾರಿಗಳ ತಂಡ ಟ್ವಿಟರ್ ಕಚೇರಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಇದು ತಾತ್ಕಾಲಿಕ ಸೈನ್ ಬೋರ್ಡ್ ಎಂದು ಟ್ವಿಟರ್ ಕಂಪನಿ ಹೇಳಿತ್ತು. ಆದರೆ ಸ್ಥಳೀಯರ ದೂರು, ಸುರಕ್ಷತೆ ಕಾರಣಗಳಿಂದ ತಕ್ಷಣವೇ ಲೋಗೋ ತೆಗೆಯುವಂತೆ ವಾರ್ನಿಂಗ್ ನೀಡಲಾಗಿದೆ. ಹೀಗಾಗಿ ಪ್ರಧಾನ ಕಚೇರಿಯಲ್ಲಿ ಅಳವಡಿಸಿದ್ದ ನೂತನ X ಲೋಗೋವನ್ನು ತೆಗೆದುಹಾಕಲಾಗಿದೆ.

Leave a Reply

Your email address will not be published. Required fields are marked *