Share this news

ಉಡುಪಿ : ಡ್ರಗ್ಸ್ ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ಆರೋಪದ ಮೇಲೆ ಮಣಿಪಾಲ ವಿಶ್ವವಿದ್ಯಾಲಯವು 42 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಅಮಾನತುಗೊಂಡಿರುವ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ವಿವಿ ತಿಳಿಸಿದೆ.

ಅಮಾನತುಗೊಂಡ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಮೂಲಸೌಕರ್ಯಗಳನ್ನು ಬಳಸದಂತೆ ನಿರ್ಬಂಧಿಸಲಾಗಿದೆ. ಮೊದಲ ಬಾರಿಗೆ, ವಿಶ್ವವಿದ್ಯಾನಿಲಯವು ಡ್ರಗ್ಸ್ ನಿರ್ಮೂಲನೆ ಮಿಷನ್‌ಗಾಗಿ ಪೊಲೀಸರೊಂದಿಗೆ ಕೈಜೋಡಿಸಿದೆ ಮತ್ತು ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಕ್ರಮಗಳನ್ನು ಕೈಗೊಂಡಿದೆ ವಿವಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತನಿಖೆಯ ವೇಳೆ ಹಲವು ಡ್ರಗ್ಸ್ ದಂಧೆಕೋರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹಾಕೇ ಅಕ್ಷಯ್ ಮಚ್ಚಿಂದ್ರ ತಿಳಿಸಿದ್ದಾರೆ. ನಮ್ಮ ತನಿಖೆಯ ಸಮಯದಲ್ಲಿ ನಾವು ಗ್ರಾಹಕರನ್ನು ಗುರುತಿಸಿದ್ದೇವೆ. ಮಣಿಪಾಲ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಕೂಡ ಮಾದಕ ದ್ರವ್ಯ ದಂಧೆಕೋರರು ಎಂದು ತಿಳಿದುಬಂದಿದೆ. ಅವರಿಂದ ಗಮನಾರ್ಹ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *