ಮೂಡಬಿದಿರೆ: ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಮೂಡುಬಿದಿರೆ ತಾಲೂಕು ಮಟ್ಟದ 14 ಮತ್ತು 17 ವಯೋಮಾನದ ಬಾಲಕ ಬಾಲಕಿಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ತಂಡಗಳು ಆಗಸ್ಟ್ನಲ್ಲಿ ನಡೆಯುವ ಜಿಲ್ಲಾ ಮಟ್ಟದ ಪಂದ್ಯಾಟಗಳಿಗೆ ಅರ್ಹತೆಯನ್ನು ಪಡೆದುಕೊಂಡಿರುತ್ತವೆ.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮೂಡುಬಿದೆರೆ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ರಾಜಶ್ರೀ, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯರಾದ ಜಯಶೀಲ ಮೂಡುಬಿದಿರೆ, ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ಪುತ್ರನ್ ಹಾಗೂ
ಶಾಲೆಯ ದೈಹಿಕ ಶಿಕ್ಷಣ ಶಿಕ್ಷರಾಗಿರುವ ರಾಜ್ ಪ್ರಸಾದ್ ಹಾಗೂ ಶಂಕರ್ ಗೌಡ ಪಾಟೀಲ್ ಉಪಸ್ಥಿತರಿದ್ದು ಬಹುಮಾನವನ್ನು ವಿತರಿಸಿದರು.
ಪಂದ್ಯಾವಳಿಗಳ ಪಲಿತಾಂಶದ ವಿವರ:
ಅಂಡರ್ 14 ಟೇಬಲ್ ಟೆನ್ನೀಸ್ ಬಾಲಕರ ವಿಭಾಗ: ಪ್ರಥಮ ಸ್ಥಾನ- ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ದರ್ಶನ್, ಮಯೂರ್, ಪ್ರವೀನ ಯಶ್ಮಿತ್ ಸಿ ಆರ್, ದೇಶ್ವಂತ್
ಅಂಡರ್ 14 ಟೇಬಲ್ ಟೆನ್ನೀಸ್ ಬಾಲಕಿಯರ ವಿಭಾಗ: ಪ್ರಥಮ ಸ್ಥಾನ -ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ಬೃಂದ, ಪೂರ್ವಿಕ, ಅಭಿಲಾಷ, ಗಾನಶ್ರೀ ಭವ್ಯ
ಅಂಡರ್ 17 ಟೇಬಲ್ ಟೆನ್ನೀಸ್ ಬಾಲಕರ ವಿಭಾಗ: ಪ್ರಥಮ ಸ್ಥಾನ- ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ಸಮರ್ಥ ಪಾಟೀಲ್ ವರುನ್, ಗಗನ್ ತೇಜಸ್ ವೆಂಕಟೇಶ್ ಯಾರಡ್ಡಿ
ಅಂಡರ್ 17 ಟೇಬಲ್ ಟೆನ್ನೀಸ್ ಬಾಲಕಿಯರ ವಿಭಾಗ: ಪ್ರಥಮ ಸ್ಥಾನ- ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ನವಮಿ, ನೇಹಾ ಬಿ ರಾಜ್,ಪರಿಣಿತ, ಧ್ರುತಿ ಡಿ.ವಿ, ನವ್ಯ
ಅಂಡರ್ 14 ಬ್ಯಾಡ್ಮಿಂಟನ್ ಬಾಲಕರ ವಿಭಾಗ: ಪ್ರಥಮ ಸ್ಥಾನ – ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ಮನ್ವಿತ್ ಜೈನ್, ಆರ್ಯನ್ ಶಿಂದೆ, ಗೌತಮ್, ಹರ್ಷಿತ್ ವಿಪುಲ್,ಅನುರಾಗ್, ಲಿಖಿತ್ ಆರನ್
ಅಂಡರ್ 14 ಬ್ಯಾಡ್ಮಿಂಟನ್ ಬಾಲಕಿಯರ ವಿಭಾಗ: ಪ್ರಥಮ ಸ್ಥಾನ- ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರು
ಅಂಡರ್ 17 ಬ್ಯಾಡ್ಮಿಂಟನ್ ಬಾಲಕರ ವಿಭಾಗ: ಪ್ರಥಮ ಸ್ಥಾನ- ರೋಟರಿ ಆಂಗ್ಲ ಮಾಧ್ಯಮ ಶಾಲೆ,ಮೂಡುಬಿದಿರೆ.
ರಿಶಾನ್, ಕ್ರಿಸ್ಟನ್, ಶಮಂತ್, ಕ್ರಿನ್ಸನ್, ಸುದಂಶು ಜೈನ್.
ಅಂಡರ್ 17 ಬ್ಯಾಡ್ಮಿಂಟನ್ ಬಾಲಕಿಯರ ವಿಭಾಗ: ಪ್ರಥಮ ಸ್ಥಾನ- ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ.
ಮೌಲ್ಯ ವೈ ಆರ್ ಜೈನ್, ಯಶಸ್ವಿನಿ, ನೀತು, ನವಮಿ, ಪ್ರಾಪ್ತಿ ನೇಹ ಬಿ ರಾಜ್