ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಮಾಜಿ ಪೊಲೀಸ್ ಕಾನ್‌ಸ್ಟೆಬಲ್ ಮೃತದೇಹ ಶನಿವಾರ ಮುಂಜಾನೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿದ್ದು,ಈ ಘಟನೆ ಕಂಡು ಸ್ಥಳೀಯರು ಆಘಾತಕ್ಕೆ ಒಳಗಾಗಿದ್ದಾರೆ.
ಕೊಲೆಯೆಂದು ಶಂಕಿಸಲಾಗಿದೆ ಎನ್ನಲಾಗುತ್ತಿರುವ ವ್ಯಕ್ತಿ ಶವ ಮಾಜಿ
ಪೊಲೀಸ್ ಕಾನ್‌ಸ್ಟೆಬಲ್ ಪೂರ್ಣೇಶ್ ಎಂಬವರದ್ದು ಎಂದು ಗುರುತಿಸಲಾಗಿದೆ. ಪೂರ್ಣೇಶ್ ಮದ್ಯ ವ್ಯಸನಿಯಾಗಿದ್ದು, ಇವರು ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ದುರ್ನಡತೆ ಕಾರಣದಿಂದ ಕೆಲ ದಿನಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದರು ಎನ್ನಲಾಗಿದೆ. ಪೂರ್ಣೇಶ್ ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.